ಗ್ರಾಮಲೆಕ್ಕಿಗನ ಮೇಲೆ ಲಾರಿ ಹತ್ತಿಸಿ ಕೊಲೆ:ನ್ಯಾಯಕ್ಕೆ ಒತ್ತಾಯಿಸಿ ನೌಕರರ ಪ್ರತಿಭಟನೆ

 ತುಮಕೂರು:

      ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯಲು ಯತ್ನಿಸಿದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಚಿಕಲಪರ್ವಿ ವೃತ್ತದ ಗ್ರಾಮ ಲೆಕ್ನಿಗರ ಮೇಲೆ ಮರಳಿನ ಲಾರಿ ಹತ್ತಿಸಿ ಕೊಲೆ ಮಾಡಿರುವುದನ್ನು ಖಂಡಿಸಿ,ಇಂದು, ಕಂದಾಯ ಇಲಾಖೆ ನೌಕರರ ಸಂಘ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

      ಕರ್ವವ್ಯದಲ್ಲಿದ್ದ ಚಿಕಲಪರ್ವಿ ಗ್ರಾಮಲೆಕ್ಕಿಗ ಸಾಹೇಬ್ ಪಾಟೀಲ್ ಎಂಬುವವರು ಮರಳು ತುಂಬಿದ್ದ ಲಾರಿ, ರಾಯಲ್ಟಿ ನೀಡಿದೆಯೇ ಎಂದು ಚೆಕ್ ಮಾಡಲು ಮರಳಿನ ಲಾರಿಯನ್ನು ಅಡ್ಡಗಟ್ಟಿದಾಗ, ಲಾರಿಯ ಚಾಲಕ ಅವರ ಮೇಲೆ ವಾಹನ ಹತ್ತಿಸಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.ಮೃತರ ಕುಟುಂಬಕ್ಕೆ ಹೆಚ್ಚಿನ ಅರ್ಥಿಕ ನೆರವು ನೀಡುವುದರ ಜೊತೆಗೆ, ಇಂತಹ ಕೆಲಸಗಳಿಗೆ ನಿಯೋಜಿತರಾಗುವ ಕಂದಾಯ ಇಲಾಖೆಯ ನೌಕರರಿಗೆ ರಕ್ಷಣೆ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

      ಪ್ರಕರಣವನ್ನು ಸಿಓಡಿ ತನಿಖೆಗೆ ಒಳಪಡಿಸಿ,ಇದರ ಹಿಂದಿರುವ ಪ್ರಭಾವಿ ವ್ಯಕ್ತಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಹಾಗೂ ಕುಟುಂಬ ಬೀದಿ ಪಾಲಾಗದಂತೆ ಸರಕಾರ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ತುಮಕೂರು ಉಪವಿಭಾಗಾಧಿಕಾರಿಗಳಿಗೆ ಕಂದಾಯ ಇಲಾಖೆಯ ನೌಕರರು ಸಲ್ಲಿಸಿದರು.

      ಪ್ರತಿಭಟನೆಯಲ್ಲಿ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ಮಹೇಶ್, ಮಂಜುನಾಥ ಸೇರಿದಂತೆ ಎಲ್ಲಾ ವೃತ್ತಗಳ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಸಹಾಯಕರು ಭಾಗವಹಿಸಿದ್ದರು.

(Visited 28 times, 1 visits today)

Related posts

Leave a Comment