ಚಿಕ್ಕನಾಯಕನಹಳ್ಳಿ : ಆಕಸ್ಮಿಕ ಬೆಂಕಿ ಅವಘಡ : ಸಾಮಗ್ರಿಗಳು ಭಸ್ಮ!

ಚಿಕ್ಕನಾಯಕನಹಳ್ಳಿ:

      ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಮನೆಯ ಮಾರು ಹಾಗೂ ಮನೆಯಲ್ಲಿದ್ದ ಕೆಲವು ಸಾಮಗ್ರಿಗಳು ಸುಟ್ಟುಹೋದ ಘಟನೆ ಪಟ್ಟಣದ ಕಾಳಿದಾಸ ಬೀದಿಯಲ್ಲಿ ವರದಿಯಾಗಿದೆ.

      ಪಟ್ಟಣದ ಕಾಳಿದಾಸ ಬೀದಿಯಲ್ಲಿ ವಾಸವಿರುವ ಭೀಮಯ್ಯ ಎಂಬುವರ ಹೆಂಚಿನ ಮನೆಗೆ ಸೋಮವಾರ ಮಧ್ಯಾಹ್ನ 12ಕ್ಕೆ ಕಾಣಿಸಿಕೊಂಡ ಬೆಂಕಿ ಸ್ವಲ್ಪ ಸಮಯದಲ್ಲಿಯೇ ಇಡೀ ಮನೆಗೆ ವ್ಯಾಪಿಸಿಕೊಂಡಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ನೆರಹೊರೆಯವರು ತಕ್ಷಣ ಆಗ್ಮಿಶಾಮಕ ಠಾಣೆಗೆ ದೂರುನೀಡಿದ ಕಾರಣ ತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರಲ್ಲಿ ಯಶಸ್ವಿಯಾದರು. ಈ ಮನೆಯಲ್ಲಿ ಭೀಮಯ್ಯ್ ಹಾಗೂ ಶಾಂತಮ್ಮ ಸೇರಿ ನಾಲ್ಕುಮಂದಿ ವಾಸವಿದ್ದರು.

      ಬೆಂಕಿ ಆಕಸ್ಮಿಕ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ಘಟನೆಯಲ್ಲಿ ಮನೆಯ ತೀರು, ಹೆಂಚು, ಮನೆಯಲ್ಲಿದ್ದ ಸುಮಾರು 2000ಕಾಯಿ, ಆಹಾರಪದಾರ್ಥಗಳು, ಮಂಚ, ದಿವಾನ್, ಬಟ್ಟೆಬರೆಗಳ ಜೊತೆಗೆ ಬೀರುವಿನಲ್ಲಿಟ್ಟದ್ದ ದಾಖಲೆ ಪತ್ರಗಳು ಸುಟ್ಟುಹೋಗಿವೆ. ತಕ್ಷಣ ಬೆಂಕಿ ನಂದಿಸಿದ ಪರಿಣಾಮ ಮನೆಯ ಹಿಂಭಾಗದಲ್ಲಿದ್ದ ದನದಕೊಟ್ಟಿಗೆ, ಅಲ್ಲಿದ್ದ ಕೊಬ್ಬರಿ, ಮೇವಿನ ಹುಲ್ಲು ಮತ್ತಿತರ ಅಗತ್ಯಸಾಮಾನುಗಳು ಸುರಕ್ಷಿತವಾಗಿ ಉಳಿದಿದೆ.

(Visited 19 times, 1 visits today)

Related posts

Leave a Comment