ಜೇನು ಕೃಷಿ ಮಾಡುವ ಮೂಲಕ ಯುವಕರಿಗೆ ಮಾದರಿಯಾದ ಯುವ ರೈತ

 ತುರುವೇಕೆರೆ :

      ಕೃಷಿ ಇಲಾಖೆಯಲ್ಲಿ ಅನುವುಗಾರರಾಗಿ ವೃತ್ತಿ ನೈಪುಣ್ಯತೆ ಪಡೆದಿದ್ದ, ತಾಲ್ಲೂಕಿನ ಮೇಲಿನವಳಗೆರೆಹಳ್ಳಿ ಗ್ರಾಮದ ರಂಗಸ್ವಾಮಿ ಜೇನು ಕೃಷಿಯಲ್ಲಿ ಜಿಕೆವಿಕೆಯಲ್ಲಿ ಜೇನುಸಾಕಾಣಿಕೆ ತರಬೇತಿ ಪಡೆದು ಬದುಕಟ್ಟಿಕೊಳ್ಳುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ.

      ಸರ್ಕಾರದಿಂದ ಜೇನು ಕೃಷಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸವಲತ್ತನ್ನು ಸದುಪಯೋಗ ಪಡಿಸಿಕೊಂಡಿರು ರಂಗಸ್ವಾಮಿ 15 ಪೆಟ್ಟಿಗೆಗಳ ಜೇನು ಸಾಕಾಣಿಕೆ ಮಾಡುವ ಮೂಲಕ ಜೇನು ಸಾಕಾಣಿಕೆಯ ಎಲ್ಲಾ ಪರಿಕರಗಳೊಂದಿಗೆ ಜೇನುತುಪ್ಪ ಸಂಗ್ರಹಣೆಗೆ ಯಂತ್ರೋಪಕರಣ ಸಹ ತಂದು ವೃತ್ತಿಪರ ಜೇನುಸಾಕಾಣಿಕೆದಾರರೆನಿಸಿದ್ದಾರೆ.

      ವಾರ್ಷಿಕವಾಗಿ 3 ತಿಂಗಳಿಗೆ 1 ಬೆಳೆಯಂತೆ ಈಗಾಗಲೇ 3-4 ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಭಾಕ್ಸ್‍ನಿಂದ ಸುಮಾರು 2 -3 ಕೆಜಿ ತುಪ್ಪ ಸಂಗ್ರಹಿಸುತ್ತಾ 30-35 ಸರಾಸರಿ ಉತ್ಪಾದನೆಯೊಂದಿಗೆ ಶುದ್ದ ಜೇನು ಸರಬರಾಜಿಗೆ ಹೆಸರು ಪಡೆದಿದ್ದಾರೆ.

      ಜೇನು ಸಾಕಾಣಿಕೆಗೆ ಅನುಗುಣವಾಗಿ ಜಮೀನಿನಲ್ಲಿ ತೆಂಗು, ಅಡಿಕೆ, ಬಾಳೆ, ಖುಷ್ಕಿಯಲ್ಲಿ ರಾಗಿ, ಅವರೆ, ತೊಗರಿ ಕೈಗೊಂಡಿದ್ದ ಅವರು ಇದೀಗ ಹೊಸದಾಗಿ ಪುಷ್ಪಕೃಷಿ ಆರಂಭಿಸಿದ್ದಾರೆ. ನಿರ್ವಹಣೆಗೆ ¨ಗೆಗೆ ಸಹ ಅತೀ ಎಚ್ಚರ ವಹಿಸಿ ಅವರ ತಂದೆ ನಂಜಪ್ಪ, ಹೆಂಡತಿಶೋಭಾ ರವರಿಗೂ ಈ ಬಗ್ಗೆ ತರಬೇತಿ ನೀಡಿದ್ದಾರೆ. ರೋಗ ಕೀಟಬಾಧೆಗಳು ಕಾಡದಂತೆ ಎಚ್ಚರಿಕೆ ವಹಿಸುವುದು ಪೆಟ್ಟಿಗೆ ತಳದಲ್ಲಿ ವಾರಕ್ಕೊಮ್ಮೆ ಶುಚಿತ್ವ ಕಾಪಾಡಿ ನೀರು ಸಂಗ್ರಹಿಸುವುದರ ಬಗ್ಗೆ ಎಚ್ಚರವಹಿಸುತ್ತಾರೆ

     ಒಟ್ಟಾರೆ ಸಮಗ್ರ ಕೃಷಿಯೊಂದಿಗೆ ಕಳೆದ 2 ವರ್ಷಗಳಿಂದ ಜೇನು ಕೃಷಿಯಲ್ಲೂ 60-70 ಸಾವಿರ ರೂ ಗಳಿಸಿ ತಾಲ್ಲೂಕಿನ ಇತರ ಜೇನು ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ,  ಅಲ್ಲದೆ ಕೊನೆಹಳ್ಳಿಯಲ್ಲಿ ವಾಣಿಜ್ಯ ಬೇಳೆಗಳು ಸೇರಿದಂತೆ ಹಣ್ಣು ಬೆಳೆಗಳ ತರಬೇತಿ ಪಡೆದಿದ್ದಾರೆ. ರಾಜೀವ್ ಗಾಂಧಿ ಚೈತನ್ಯ ಯೋಜನೆಯಲ್ಲಿ ಕೃಷಿ ಉದ್ಯಮ ತರಬೇತಿ, ಹೈನುಗಾರಿಕೆ, ನರ್ಸರಿ ತರಬೇತಿಗಳೊಂದಿಗೆ ತಾಲ್ಲೂಕಿನ ಪ್ರಗತಿಪರ ಕೃಷಿ ಪ್ರಶಸ್ತಿಯನ್ನು ಗಳಿಸಿದ್ದಾರೆ.

(Visited 13 times, 1 visits today)

Related posts

Leave a Comment