ಟಿಪ್ಪರ್ ಲಾರಿ ಹಾಗೂ ಸರ್ಕಾರಿ ಬಸ್ ಡಿಕ್ಕಿ : ಇಬ್ಬರ ಸಾವು

ಗುಬ್ಬಿ:

      ಹೆದ್ದಾರಿ ರಸ್ತೆ ಬದಿ ಯಲ್ಲಿ ನಿಂತಿದ್ದ ಟಿಪ್ಪರ್ ಲಾರಿ ಯ ಹಿಂಬದಿಗೆ ಗುದ್ದಿದ್ದ ಸರ್ಕಾರಿ ಬಸ್ ಸಂಪೂರ್ಣ ಜಖಂಗೊಂಡು ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಏಳು ಮಂದಿ ಗಂಭೀರ ಗಾಯಗೊಂಡ ಘಟನೆ ಮುಂಜಾನೆ ನುಸುಕಿನಲ್ಲಿ ತಾಲ್ಲೂಕಿನ ನಿಟ್ಟೂರು ಬಾಗೂರು ಬಳಿ ರಾ.ಹೆ 206 ರಲ್ಲಿ ನಡೆದಿದೆ.

      ಬಸ್‍ನಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ತಡಿಗೆಬಯಲು ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದ ಶಿವಮೂರ್ತಿ(24) ಹಾಗೂ ಪೂಜಾ(20) ಮೃತರಾದ ದುರ್ದೈವಿಗಳು. ಬಸ್ ಚಾಲಕನ ಅಜಗರೂಕತೆಯಿಂದ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿ ಗಮನಿಸದೇ ವೇಗವಾಗಿ ಬಂದು ಗುದ್ದಿದ ಚಾಲಕ ಪಾರಾಗಿದ್ದು, ಎಡ ಬದಿಯಲ್ಲಿ ಕುಳಿತಿದ್ದ ಈ ಇಬ್ಬರು ಬಲಿಯಾದರು.

      ಶಿವಮೂರ್ತಿ ಮತ್ತು ಪೂಜಾಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾದೇ ಈರ್ವರು ಮೃತಪಟ್ಟರು. ಉಳಿದಂತೆ ಏಳು ಮಂದಿಗೆ ತೀವ್ರ ಸ್ವರೂಪದ ಗಾಯಗೊಂಡವರನ್ನು ಬೆಂಗಳೂರು ಮತ್ತು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆಗಮಿಸಿದ್ದ ಗುಬ್ಬಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.

(Visited 4 times, 1 visits today)

Related posts

Leave a Comment