ಟಿಪ್ಪು ಜಯಂತಿ ಅಂಗವಾಗಿ ರಕ್ತದಾನ ಶಿಬಿರ 

ಮದ್ದೂರು:
      ವಿರೋಧದ ನಡುವೆಯೂ ತಾಲ್ಲೂಕು ಆಡಳಿತದ ವತಿಯಿಂದ ಜಾಮೀಯಾ ಶಾದಿ ಮಹಲ್ ನಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಸಲಾಯಿತು.
      ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾರಿಗೆ ಸಚಿವ ಡಿ‌.ಸಿ.ತಮ್ಮಣ್ಣ ರವರು ಮಾತನಾಡಿ ಕೆ ಆರ್ ಎಸ್ ಜಲಾಶಯಕ್ಕೆ ಮೊದಲು ಯೋಜನೆ ರೂಪಿಸಿದ್ದು ಟಿಪ್ಪು ಸುಲ್ತಾನ್ ಆದರೆ ಅದು ಕಾರ್ಯ ರೂಪಕ್ಕೆ ಬರಲಿಲ್ಲ ನಂತರ ಕೃಷ್ಣ ರಾಜ ಒಡೆಯರ್ ಅವರು ತಮ್ಮ ಒಡವೆಗಳನ್ನು ಬಾಂಬೆಯಲ್ಲಿ ಅಡವಿಟ್ಟು ಜಲಾಶಯ ನಿರ್ಮಿಸಿದರು ಟಿಪ್ಪು ಹಿಂದೂಗಳ ವಿರೋಧಿಯಾಗಿದ್ದರೆ ಮೇಲುಕೋಟೆ ನಂಜನಗೂಡು ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ  ಹಣ ಆಭರಣಗಳನ್ನು ಯಾಕೆ ನೀಡಬೇಕಿತ್ತು ಎಂದರು
      ನಂತರ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು 
ಈ ರಕ್ತವನ್ನು ಬೆಂಗಳೂರಿನ ಆದಿ ಚುಂಚನಗಿರಿ ಮಠದ ಆಸ್ಪತ್ರೆಗೆ ನೀಡಲಾಗುವುದು ಎಂದು  ಪುರಸಭಾ ಸದಸ್ಯ ಆದಿಲ್ ಆಲಿ ಖಾನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಐದು ಮಂದಿ ಮಹಿಳಾ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು
      ಪಟ್ಟಣದಲ್ಲಿ ನಿಷೇದಾಜ್ಞೆ ಹೊರಡಿಸಿದ್ದ ಕಾರಣ ಬ್ಯಾನರ್ ಬಂಟಿಂಗ್ಸ್ ಬೈಕ್ ರ್ಯಾಲಿ ಯಾವುದೇ ರೀತಿಯ ಮೆರವಣಿಗೆ ನಡೆಯದಂತೆ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ರವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು 
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ , ನೂತನ ಪುರಸಭಾ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರುಗಳಾದ  ಆದಿಲ್, ಫೈರೋಜ್, ಜಾಮೀಯ ಶಾದಿ ಮಹಲ್ ಕಮಿಟಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
      ಇದೇ ವೇಳೆ  ಮಂಡ್ಯ ಜಿಲ್ಲೆಯ ಗಡಿ ಭಾಗ ನಿಡಘಟ್ಟದ ಬಳಿ ತಾತ್ಕಾಲಿಕವಾಗಿ ಪೋಲೀಸ್ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು ಜಿಲ್ಲೆಗೆ ಬರುವ  ಪ್ರತಿಯೊಂದು ವಾಹನಗಳ ಮೇಲೆ ನಿಗಾ ಇಡಲಾಗಿತ್ತು.
 
 
(Visited 16 times, 1 visits today)

Related posts