ಡಿ.14 – 15 : ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ

ತುಮಕೂರು:

      ಮಳೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ ಡಿ. 14 ಶನಿವಾರ ಮತ್ತು 15 ಭಾನುವಾರ ನಡೆಯಲಿದೆ.

      ಕಳೆದ ಬಲಿಪಾಢ್ಯಮಿಯಂದು ಇತಿಹಾಸ ಪ್ರಸಿದ್ದ ಗೂಳೂರು ಗಣೇಶನನ್ನು ಪ್ರತಿಷ್ಠಾಪಿಸಿ ಅಂದಿನಿಂದ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದ್ದು, 18 ಕೋಮಿನ ಜನರ ಸಹಕಾರದೊಂದಿಗೆ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವವನ್ನು ಡಿ. 14 ಮತ್ತು 15 ರಂದು ನಡೆಸಲು ತೀರ್ಮಾನಿಸಿದ್ದಾರೆ.

      ಮಳೆ ಹಿನ್ನೆಲೆಯಲ್ಲಿ ದೇವಾಲಯದ ಗೋಪುರದ ಅಡಿ ಕೂರಿಸಲಾಗಿರುವ ಗಣೇಶಮೂರ್ತಿಗೆ ಕಿರೀಟ ಧಾರಣೆ, ಪುಣ್ಯ ಮಾಡಿ ಭಕ್ತಾದಿಗಳಿಗೆ ನೆರವೇರಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲು ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.

      ಗ್ರಾಮಸ್ಥರ ತೀರ್ಮಾನದಂತೆ ಡಿ. 14 ರಂದು ರಾತ್ರಿ ಗಣೇಶಮೂರ್ತಿಯು ದೇವಾಲಯದ ಗೋಪುರದಿಂದ 18 ಕೋಮಿನ ಜನರ ಸಹಕಾರದೊಂದಿಗೆ ರಥಕ್ಕೆ ಕೂರಿಸಿ ವೈಭವಯುತವಾಗಿ ಇಡೀ ರಾತ್ರಿ ಮೆರವಣಿಗೆ ಆಕರ್ಷದ ಸಿಡಿ ಮದ್ದಿನ ಪ್ರದರ್ಶನದೊಂದಿಗೆ ನಡೆಸಲಾಗುವುದು. ಮತ್ತೆ ಶನಿವಾರದ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಗಣೇಶಮೂರ್ತಿಯನ್ನು ವಿಸರ್ಜಿಸಲು ಗ್ರಾಮಸ್ಥರ ಸಭೆಯಲ್ಲಿ ತೀರ್ಮಾನಿ ಸಲಾಗಿದೆ.

      ಹಾಗೆಯೇ ಡಿ. 16 ಭಾನುವಾರದ  ಬೆಳಿಗ್ಗೆ 11 ಗಂಟೆಗೆ ಜಾತ್ರೆಯ ನಂತರ ಶ್ರೀ ಮಹಾಗಣಪತಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಗೂಳೂರು ಮಹಾಗಣಪತಿ ಭಕ್ತ ಮಂಡಳಿಯ ಅಧ್ಯಕ್ಷ ಜಿ.ಎಸ್. ಶಿವಕುಮಾರ್ ತಿಳಿಸಿದ್ದಾರೆ.

(Visited 32 times, 1 visits today)

Related posts