ತುಮಕೂರು : ನವಜಾತ ಹೆಣ್ಣು ಶಿಶು ಪತ್ತೆ!

 ತುಮಕೂರು: 
    ಗ್ರಾಮಸ್ಥರೊಬ್ಬರು ಹೊಲದ ಬಳಿ ಹೋಗುತ್ತಿದ್ದಾಗ ಮಗು ಅಳುವ ಶಬ್ದ ಕೇಳಿದ್ದಾರೆ. ಆಗ ಸಮೀಪ ಹೋಗಿ ನೋಡಿದ ಅವರಿಗೆ ಆಗ ತಾನೆ ಹುಟ್ಟಿರೋ ಹೆಣ್ಣುಮಗು ಪತ್ತೆಯಾಗಿದೆ
      ತಕ್ಷಣವೇ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅನಂತರ ಮಹದೆವಮ್ಮ ಎಂಬುವರು ಮಗುವಿಗೆ ಆರೈಕೆ ಮಾಡಿದ್ದಾರೆ. ವೈದ್ಯರ ಪ್ರಕಾರ ಶಿಶು ಇಂದು ಬೆಳಿಗ್ಗೆ ಜನಿಸಿರಬಹುದು ಎಂದು ಹೇಳಲಾಗಿದೆ. ಶಿಶು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ವಿಶೇಷ ನವಜಾತ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

   

  ಇಂದು ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ಮಗು ಜನಿಸಿದ್ದು, ಮಗುವನ್ನ ಹಾಗೇ ಬೀಸಾಡಿ ಹೋಗಿರುವುದರಿಂದ ತೀವ್ರ ಶೀತಕ್ಕೆ ರಕ್ತ ಹೆಪ್ಪುಗಟ್ಟಿದೆ. ಅಲ್ಲದೇ ಮಗುವಿನ ಉಸಿರಾಟದಲ್ಲೂ ತೀವ್ರ ತೊಂದರೆ ಇದೆ ಎಂದು ಆರೈಕೆ ಮಾಡುತ್ತಿರುವ ನರ್ಸ್ ಹೇಳುತ್ತಿದ್ದಾರೆ.

     ಶಿಶುವಿನ ಹೊಕ್ಕುಳ ಬಳ್ಳಿಯಲ್ಲಿ ದಾರ ಕಟ್ಟಿರುವುದು ಪತ್ತೆಯಾಗಿದೆ‌. ಹೀಗಾಗಿ ಸುತ್ತಮುತ್ತಲ ಪ್ರದೇಶದ ಮನೆಯಲ್ಲೇ ಮಗು ಜನಿಸಿರುವುದು ಸ್ಪಷ್ಟವಾಗಿದೆ. ಸದ್ಯ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮಗುವನ್ನು ವಶಕ್ಕೆ ಪಡೆಯಲಿದ್ದಾರೆ.

 

 

(Visited 18 times, 1 visits today)

Related posts

Leave a Comment