ತುಮಕೂರು : ಶಾಸಕರಿಂದ ವೀರಮದಕರಿ ನಾಯಕನ ನಾಮಫಲಕ ಅನಾವರಣ!

ತುಮಕೂರು :

      ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ವೃತ್ತದಲ್ಲಿ ಮಹಾನಗರ ಪಾಲಿಕೆ ವತಿಯಿಂದ ವೀರಮದಕರಿ ನಾಯಕ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

      ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ವೀರಮದಕರಿ ನಾಯಕ ನಾಮಫಲಕದ ಉದ್ಘಾಟನೆಯನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ನೆರವೇರಿಸಿದರು.

      ನಂತರ ಮಾತನಾಡಿದ ಅವರು, ಸದರಿ ವೃತ್ತಕ್ಕೆ ವೃತ್ತಕ್ಕೆ ವೀರಮದಕರಿ ನಾಯಕ ಹೆಸರಿಡಬೇಕು ಎಂಬ ಕೂಗು ಬಹಳ ದಿನಗಳಿಂದ ಇತ್ತು. ಪಾಲಿಕೆ ಸದಸ್ಯರು ಮಹಾನಗರ ಪಾಲಿಕೆಯಲ್ಲಿ ಈ ವಿಷಯ ಮಂಡಿಸಿ ನಾಮಫಲಕ ಅನಾವರಣಗೊಳಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.

      ವೀರಮದಕರಿ ನಾಯಕ ನಾಮಫಲಕ ಅನಾವರಣಗೊಳಿಸಿರುವುದು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಮದಕರಿನಾಯಕರು ಇಡೀ ದೇಶಕ್ಕೆ ಸಲ್ಲಬೇಕಾದವರು ಎಂದರು.

       ನಾಯಕ ಜನಾಂಗಕ್ಕೆ ಸಂಬಂಧಿಸಿದ ವೀರರ ಯಾವುದೇ ಡಾಕ್ಯುಮೆಂಟ್ ಆಗಿಲ್ಲ. ಹಾಗಾಗಿ ತುಮಕೂರು ವಿವಿಯಲ್ಲಿ ಮದಕರಿ ನಾಯಕ ಹಾಗೂ ನಾಯಕ ಸಮಾಜಕ್ಕೆ ಸೇರಿದ ರಾಜ-ಮಹಾರಾಜರುಗಳಿಗೆ ಸಂಬಂಧಿಸಿದಂತೆ ಅಧ್ಯಯನ ಕೇಂದ್ರ ತೆರೆಯಲು ತುಮಕೂರು ವಿವಿಯ ಪೆÇ್ರಫೆಸರ್ ಕೊಟ್ರೇಶ್ ಅವರು ಮುತುವರ್ಜಿ ವಹಿಸಿದ್ದಾರೆ. ಇದಕ್ಕ ನಮ್ಮ ಸಹಕಾರ, ಬೆಂಬಲ ಸದಾ ಇದೆ ಎಂದ ಅವರು, ಈಗಾಗಲೇ ತಾವು ತುಮಕೂರು ವಿವಿ ಕುಲಪತಿಗಳೊಂದಿಗೂ ಈ ಸಂಬಂಧ ಚರ್ಚಿಸಿರುವುದಾಗಿ ಹೇಳಿದರು.

      ಶೆಟ್ಟಿಹಳ್ಳಿ ಭಾಗಕ್ಕೆ ಬಸ್ ನಿಲ್ದಾಣ ಸ್ಥಾಪಿಸಲು ಹಣ ಸಿದ್ದಪಡಿಸಿದ್ದು, ಶೀಘ್ರದಲ್ಲೇ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು.

       ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ಬಡಾವಣೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

      ಈ ಭಾಗಕ್ಕೆ ರುದ್ರಭೂಮಿ ಬೇಕು ಎಂಬ ಬಗ್ಗೆ ಬಂದ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಜತೆ ಚರ್ಚಿಸಿ ಸ್ಮಶಾನಕ್ಕೆ ಸೂಕ್ತ ಜಾಗ ಒದಗಿಸಿಕೊಡುವುದಾಗಿ ಹೇಳಿದರು.

       ಪಾಲಿಕೆ ವಿರೋಧ ಪಕ್ಷದ ನಾಯಕ ಸಿ.ಎನ್. ರಮೇಶ್ ಮಾತನಾಡಿ, ಈ ವೃತ್ತಕ್ಕೆ ವೀರಮದಕರಿ ನಾಯಕ ನಾಮಫಲಕ ಹಾಕುವ ಸಂಬಂಧ ಪಾಲಿಕೆ ಸಭೆಯಲ್ಲಿ ವಿಚಾರವನ್ನು ಮಂಡಿಸಿ ಅನುಮತಿ ಪಡೆದು ವೃತ್ತಕ್ಕೆ ನಾಮಕರಣ ಮಾಡಲಾಯಿತು ಎಂದರು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ತು.ಬಿ. ಮಲ್ಲೇಶ್, ಪ್ರತಾಪ್, ಮಹದೇವಪ್ಪ, ಕೃಷ್ಣಮೂರ್ತಿ, ಎಸ್.ಟಿ.ಡಿ.ನಾಗರಾಜು, ವರಲಕ್ಷ್ಮಿ, ರಾಮಚಂದ್ರ, ನಾಗರಾಜು, ಚೇತನ್ ಮತ್ತಿತರರು ಉಪಸ್ಥಿತರಿದ್ದರು.

(Visited 33 times, 1 visits today)

Related posts

Leave a Comment