ತುಮಕೂರು : ಸ್ಮಾರ್ಟ್ ಸಿಟಿ ಕಿರೀಟಕ್ಕೆ “ಸರ್ಟಿಫಿಕೇಟ್ ಆಫ್ ಮೆರಿಟ್” ಪ್ರಶಸ್ತಿ ಗರಿ

ತುಮಕೂರು :

      ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವತಿಯಿಂದ ಸ್ಮಾರ್ಟ್ ಲಾಂಜ್, ಡಿಜಿಟಲ್ ಲೈಬ್ರರಿ ಮತ್ತು ಡಿಜಿಟಲ್ ಕ್ಲಾಸ್‍ರೂಮ್ ಯೋಜನೆಗಳನ್ನು ಅನುಷ್ಠಾನಗೊಳಿಸಿ ನಗರದ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಮತ್ತು ವಾಸಯೋಗ್ಯ ಹಾಗೂ ಸುಸ್ಥಿರವಾಗಿಸಿರುವುದಕ್ಕಾಗಿ “ಸರ್ಟಿಫಿಕೇಟ್ ಆಫ್ ಮೇರಿಟ್ ಪ್ರಶಸ್ತಿ” ದೊರೆತಿದೆ.

      ದೆಹಲಿಯಲ್ಲಿಂದು ನಡೆದ Ministry of Urban Affairs ರವರಿಂದ ಆಯೋಜೀತ “ಸ್ಮಾರ್ಟ್ ಸಿಟಿ ಎಮ್ ಪವರಿಂಗ್ ಇಂಡಿಯಾ ಅವಾರ್ಡ್-2019”(Smart City Empowering India Awards-2019)ಕಾರ್ಯಕ್ರಮದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಸಿದ್ದಾರೆ.

(Visited 5 times, 1 visits today)

Related posts