ತುರುವೇಕೆರೆಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ!!

ತುರುವೇಕೆರೆ:

      ಮುಂಬರಲಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಹದಿನೈದಕ್ಕೆ ಹದಿನೈದು ಸ್ಥಾನಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಲಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

       ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ನಡೆಯಲಿರುವ ಡಾ:ಕರಿವೃಷಭ ದೇಶಿಕೇಂದ್ರ ಸ್ವಾಮಿಯವರ 25ನೇ ವರ್ಷದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ 15ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಇದರಲ್ಲಿ ಅನುಮಾನವೇ ಬೇಡ, ನನಗೆ ಹಲವು ಉಪಚುನಾವಣೆಗಳನ್ನು ನಡೆಸಿದ ಅನುಭವವಿದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರ ನಿರೀಕÉ್ಷಗೆ ಮೀರಿ ಸ್ಪಂದಿಸುತ್ತಿದ್ದು, ಹಾಗಾಗಿ ಪಕ್ಷದ ಹದಿನೈದು ಅಭ್ಯರ್ಥಿಗಳು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಆರೋಗ್ಯ ಇಲಾಖೆಯಲ್ಲಿ ಕೆ.ಪಿ.ಎಸ್.ಸಿ. ಮೂಲಕ ನಡೆಯುತ್ತಿದ್ದ ವೈದ್ಯರ ನೇಮಕಾತಿ ಪದ್ದತಿಯನ್ನು ರದ್ದು ಮಾಡಿದ್ದು, ನೇರವಾಗಿ ನೇಮಕಾತಿ ಮಾಡಿಕೊಳ್ಳುವ ಕ್ರಮಕ್ಕೆ ಮುಂದಾಗಿದ್ದೇವೆ, ಹಾಗೂ ಸರ್ಕಾರಿ ಕರ್ತವ್ಯದಲ್ಲಿರುವ ವೈದ್ಯರು ಖಾಸಗಿ ಕ್ಲಿನಿಕ್‍ಗಳನ್ನು ನಡೆಸಿದರೆ ಸರ್ಕಾರಿ ಸೇವೆಗೆ ನ್ಯಾಯ ಒದಗಿಸಿದಂತಾಗುವುದಿಲ್ಲa, ಹಾಗಾಗಿ ಅಂತಹ ವೈದ್ಯರುಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಆದರೆ ಕರ್ತವ್ಯದ ವೇಳೆ ಮುಗಿದ ನಂತರ ಉಚಿತವಾಗಿ ಸಾರ್ವಜನಿಕ ಸೇವೆ ಮಾಡಲು ಅವಕಾಶವಿದೆ, ಈ ನಿಯಮವನ್ನು ದುರುಪಯೋಗಪಡಿಸಿಕೊಂಡಿರುವ ಕೆಲವರು ಖಾಸಗಿ ಕ್ಲಿನಿಕ್‍ಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಅಂತಹವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

      ಇದಕ್ಕೂ ಮುಂಚೆ ವಾಲ್ಮಿಕಿ ಸಮುದಾಯದ ಮುಖಂಡರಾದ, ವಸಂತ್ ಕುಮಾರ್, ರಾಮಾಂಜಿನಯ್ಯ, ಸೋಮಶೇಖರಯ್ಯ, ಉಮರಾಜ್ ಸೇರಿದಂತೆ ಹಲವರು ಸಚಿವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಪಠಾಕಿ ಸಿಡಿಸಿ ಸಂಭ್ರಮಿಸಿದರು.

      ಈ ಸಂಧರ್ಭದಲ್ಲಿ ಸಚಿವರೊಂದಿಗೆ ಪಕ್ಷದ ಅಧ್ಯಕ್ಷ ದುಂಡಾ ರೇಣುಕಪ್ಪ, ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಕಾಳಂಜಿಹಳ್ಳಿ ಸೋಮಣ್ಣ, ವಿ.ಟಿ.ವೆಂಕಟರಾಮಯ್ಯ, ಎಡಗಿಹಳ್ಳಿವಿಶ್ವನಾಥ್, ಜಿ.ವಿ.ಪ್ರಕಾಶ್, ಡಿ.ಆರ್.ಬಸವರಾಜ್, ಮಂಜುನಾಥ್, ಅನಿತ ನಂಜುಂಡಯ್ಯ, ಶಿಕ್ಷಕ ನಟೇಶ್, ಇಂಡಿಯನ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ರುದ್ರಯ್ಯ ಹಿರೀಮಠ್ ಇತರರು ಇದ್ದರು.

(Visited 12 times, 1 visits today)

Related posts