ದೆಬ್ಬೇಘಟ್ಟ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆಗೆ ಶಾಸಕರ ಭರವಸೆ

ತುರುವೇಕೆರೆ :

       ಪಟ್ಟಣದ ಪ್ರಮುಖ ರಸ್ತೆಯಾದ ದೆಬ್ಬೇಘಟ್ಟ ರಸ್ತೆಯನ್ನು ಜಿಲ್ಲಾ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಿದ್ದು, ಶೀಘ್ರದಲ್ಲಿಯೇ 25 ಮೀಟರ್ ಅಳತೆಯುಳ್ಳ ಸುಸಜ್ಜಿತ ರಸ್ತೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು. 

        ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಬೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಈ ಹಿಂದೆ ದಬ್ಬೇಘಟ್ಟ ರಸ್ತೆಯನ್ನು 13.50 ಮೀಟರ್ ಮಾಡಲು ತಿರ್ಮಾನಿಸಲಾಗಿತ್ತು ಅದರಂತೆ ರಸ್ತೆ ಕಾಮಗಾರಿ ಪ್ರಾರಂಬಿಸಲಾಗಿತ್ತು ನಂತರ ಕೆಲವು ಕಟ್ಟಡದ ಮಾಲೀಕರು ಮಾಡಿದ ಗೊಂದಲದಿಂದಾಗಿ ರಸ್ತೆ ಅರ್ದಕ್ಕೆ ನಿಂತಿದೆ. ಜಿಲ್ಲಾದಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ಈಗಾಗಲೆ ನಡೆದಿದ್ದು, ದಬ್ಬೇಘಟ್ಟ ರಸ್ತೆಯ ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಮಳಿಗೆಗಳ ತೆರವುಗೊಳಿಸುವ ಕಾರ್ಯವನ್ನು ಶೀಘ್ರ ಮಾಡಲಾಗುವುದು ಎಂದು ತಿಳಿಸಿದರು.

       ಸರಿಯಾದ ಮಾಹಿತಿ ಇಲ್ಲದೆ ಮೀಟಿಂಗ್ ಬಂದಿದ್ದಿರಾ ಇಲಾಖೆ ಇಂಜಿನಿಯರ್ ಹಾಗೂ ಇಲಾಖೆಯ ಸರಿಯಾದ ಮಾಹಿತಿನೇ ನಿಮ್ಮಲಿ ಇಲ್ಲ ದಬ್ಬೇಘಟ್ಟ ರಸ್ತೆಯ ಬಗ್ಗೆನೂ ಸಂಪೂರ್ಣ ಮಾಹಿತಿ ನೀಡಲಿಲ್ಲ ಎಂದು ಲೋಕಪಯೋಗಿ ಇಲಾಖೆಯ ಎಇಇ ಗುರುಸಿದ್ದಪ್ಪರನ್ನು ಶಾಸಕ ಮಸಾಲಜಯರಾಮ್ ತರಾಟೆಗೆ ತೆಗೆದುಕೊಂಡರು.

       ಎಸ್.ಎಸ್.ಎಲ್.ಸಿಯಲ್ಲಿ ಪಸ್ಟ್ ನಾವಿರಬೇಕು: ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ ಪಲಿತಾಂಶ ಕಳೆದ ಬಾರಿಗಿಂತ ಹೆಚ್ಚು ನೀಡಬೇಕು. ಇದರ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದಿರಾ ಎಂದು ಬಿಇಓ ರಂಗಾಮಯ್ಯರನ್ನು ಪ್ರಶ್ನಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುವಂತೆ ಶಿಕ್ಷಕರು, ಸಿಬ್ಬಂದಿ ಮಕ್ಕಳು ಶ್ರಮ ವಹಿಸಬೇಕಿದೆ. ತಾಲೂಕಿನ ಎಲ್ಲ ಫ್ರೌಡ ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯ ಪಠ್ಯ ಪಾಠ, ಬೋದನೆ ಹಾಗೂ ಚಟುವಟಿಕೆಗಳು ಸರಿಯಾಗಿ ನೀಡಬೇಕು ಎಂದು ತಿಳಿಸಿದರು.

      ರಸ್ತೆ ಗುಂಡಿ ಮುಚ್ಚಿ ಸ್ವಾಮಿ: ತಾಲೂಕಿನ ದಬ್ಬೇಘಟ್ಟ ಹೋಬಳಿಯ ಗಡಿಭಾಗದ ರಸ್ತೆಗಳು ದೊಡ್ಡ ಗುಂಡಿಗಳಾಗಿ ಜನರು ಸಂಚಾರ ಮಾಡಲು ಹಾಗುತ್ತಿಲ್ಲ. ಇನ್ನೇನು ಗ್ರಾಮದ ಹಬ್ಬಗಳು ಪ್ರಾರಂಬವಾಗಲಿದ್ದು ಜನರು ರಸ್ತೆಯಲ್ಲಿ ಸಂಚರಿಸುವಾಗ ಯಾವುದಾದರೂ ತೊಂದರೆಯಾದರೆ ನೀವೇ ಹೊಣೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಬಾಗ್ಯಮ್ಮರಮೇಶ್‍ಗೌಡ ಸಭೆಯಲ್ಲಿದ್ದ ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರೇಣುಕಕೃಷ್ನಮೂರ್ತಿ, ಬಾಗ್ಯರಮೇಶ್‍ಗೌಡ, ಡಿಸಿಸಿ. ಬ್ಯಾಂಕ್ ನಿರ್ದೇಶಕ ದೇವರಾಜು, ಇ.ಓ.ಜಯಕುಮಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

(Visited 8 times, 1 visits today)

Related posts

Leave a Comment