ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಟೆಂಪೋ ಟ್ರಾವೆಲರ್

      ತುಮಕೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣ ಚಾಲಕ ವಾಹನ ಚಾಲನೆ ಸ್ಥಗಿತಗೊಳಿಸಿದರು.  ಏನಾಗಿದೆ ಎಂದು ಚಾಲಕ ಪರೀಕ್ಷಿಸಲು ಮುಂದಾಗುತ್ತಿದ್ದಂತೆ ಟೆಂಪೋ ಟ್ರಾವೆಲರ್ ಒಳಗೆ ಶಾರ್ಟ್​ ಸರ್ಕ್ಯೂಟ್ ಆಗಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ತಕ್ಷಣ ವಾಹನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ನೋಡ ನೋಡುತ್ತಿದ್ದಂತೆ ವಾಹನ ಧಗ ಧಗ ಹೊತ್ತಿ ಉರಿದಿದೆ.

      ಭಾರಿ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ವ್ಯಾಪಿಸಿದ್ದರಿಂದ ಇನ್ನಿತರ ವಾಹನ ಚಾಲಕರು, ಜನರು  ಕೆಲಕಾಲ ಗಾಬರಿಗೊಂಡರು. ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ದೌಡಾಯಿಸಿದ್ದಾರೆ.  ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ  ಪ್ರಾಣಾಪಾಯ ಸಂಭವಿಸಿಲ್ಲ

(Visited 14 times, 1 visits today)

Related posts

Leave a Comment