ನಮ್ಮಿಬ್ಬರದು ಮದುವೆಯಾಗಿ, ಸಂಸಾರ ಚೆನ್ನಾಗಿ ನಡೆಯುತ್ತಿದೆ : ಎಚ್. ವಿಶ್ವನಾಥ್

ಮೈಸೂರು:

      ಈಗಾಗಲೇ ನಮ್ಮಿಬ್ಬರದು ಮದುವೆಯಾಗಿದೆ. ಸಂಸಾರ ಚೆನ್ನಾಗಿ ನಡೆಯುತ್ತಿದೆ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಒಂದೇ ಕುಟುಂಬ ಆಗಿರುವುದರಿಂದ ಬಾಳ್ವೆ ಚೆನ್ನಾಗಿ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಿಳಿಸಿದರು.

      ಮೈತ್ರಿ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು,“ಇಂದು ಸಮ್ಮಿಶ್ರ ಸರಕಾರ ಆರು ತಿಂಗಳನ್ನು ಪೂರೈಸಿದೆ. ಮೈತ್ರಿ ಸರಕಾರ ಚೆನ್ನಾಗಿ ಸಂಸಾರ ಮಾಡುತ್ತಿದೆ. ತೊಂದರೆ ಏನು ಇಲ್ಲ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ಕುಟುಂಬವಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

      ಇಂದು ದೋಸ್ತಿ ಸರಕಾರಕ್ಕೆ ಅರ್ಧವಾರ್ಷಿಕ ಸಂಭ್ರಮ. ಮೈತ್ರಿ ಸರಕಾರ ರಚನೆಯಾಗಿ ಇಂದಿಗೆ ಆರು ತಿಂಗಳನ್ನು ಪೂರೈಸಿದೆ. 2018 ಮೇ 23 ರಂದು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

 

(Visited 14 times, 1 visits today)

Related posts

Leave a Comment