ನಾಪತ್ತೆಯಾಗಿದ್ದ ತುಮಕೂರು ವಿವಿ ಪ್ರಾಧ್ಯಾಪಕ ನೇಣಿಗೆ ಶರಣು!

      ಈಶ್ವರ್ (57)) ಮೃತದೇಹ ತುಮಕೂರು ಇಸ್ರೋ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಡಿಸೆಂಬರ್ 9ರಂದು ವಾಯುವಿಹಾರಕ್ಕೆಂದು ಹೊರಟವರು ಮತ್ತೆ ಹಿಂತಿರುಗಿರಲಿಲ್ಲ.
      ಈಶ್ವರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರಬೇಕೆಂದು ಶಂಕೆ ವ್ಯಕ್ತವಾಗಿದ್ದು ಪ್ರಾಂಶುಪಾಲರ ನಾಪತ್ತೆ ಮತ್ತು ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
      ವಿಶ್ವವಿದ್ಯಾನಿಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಈಶ್ವರ್ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.ಅವರ ಸಹೋದ್ಯೋಗಿಗಳೇ ಈ ಆರೋಪ ಹೊರಿಸಿದ್ದರು. ಆದರೆ ಇನ್ನೊಂದೆಡೆ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಸಹೋದ್ಯೋಗಿಗಳ ವಿರುದ್ಧ ಈಶ್ವರ್ ಪೋಷಕರು ಕಿರುಕುಳದ ಆರೋಪ ಮಾಡಿದ್ದಾರೆ.
      ಘಟನೆ ಕುರಿತು ತುಮಕೂರು ಹೊಸ ಬಡಾವಣೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
(Visited 19 times, 1 visits today)

Related posts

Leave a Comment