ಪತಿಯ ಕಾಟ ತಾಳಲಾರದೇ ಪತ್ನಿ ನೇಣಿಗೆ ಶರಣು

ಚಿಕ್ಕನಾಯಕನಹಳ್ಳಿ :

      ತಾಲ್ಲೂಕಿನ ಹಂದನಕೆರೆ ಹೋಬಳಿಯ ರಂಗಾಪುರ ಗ್ರಾಮದ 21 ವರ್ಷದ ಯಶೋಧ ತನ್ನ ವೇಲನ್ನೇ ಕುತ್ತಿಗೆಗೆ ಕುಣಿಕೆ ಮಾಡಿಕೊಂಡು ಮೃತ ಪಟ್ಟಿರುವ ಘಟನೆ ನಡೆದಿದೆ.

      ಹುಳಿಯಾರು ಹೋಬಳಿಯ ಕುರಿಹಟ್ಟಿ ನಿವಾಸಿ ಲಿಂಗರಾಜುಗೆ ಮಗಳಾದ ಯಶೋದಳನ್ನು ಹಂದನಕೆರೆ ಹೋಬಳಿಯ ರಂಗಾಪುರ ಗ್ರಾಮದ ನಿವಾಸಿ ಪಾಂಡುರಂಗನಿಗೆ ವಿವಾಹ ಮಾಡಿಕೊಡಲಾಗಿತ್ತು, ಗಂಡ ಪಾಂಡುರಂಗ ತನ್ನ ಹೆಂಡ್ತಿಗೆ ಹಣ ತರುವಂತೆ ಪೀಡಿಸುತ್ತಿದ್ದ ಇವನ ಒತ್ತಡಕ್ಕೆ ಮಣಿದ ಮಾವನ ಮನೆಯವರು ಒಂದು ಚಿನ್ನದ ಸರವನ್ನು ಕೊಟ್ಟಿದ್ದರು. ತೃಪ್ತನಾಗದ ಅಳಿಮಯ್ಯ ಹೆಂಡತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇವನ ಕಾಟಕ್ಕೆ ಸೋತುಹೋಗಿದ್ದ ಹೆಂಡತಿ ಯಶೋಧ ಗಂಡನ ಮನೆಯಲ್ಲಿ ನೇಣು ಬಿಗಿದು ಸತ್ತಿರುತ್ತಾಳೆ.

      ಮೃತ ಯಶೋದ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡಿಕೊಂಡು ಗಂಡನ ಹೆಗಲಿಗೆ ಹೆಗಲಾಗಿ ದುಡಿದು ಜೀವನ ನಡೆಸುತ್ತಿದ್ದಳು. ಆರೋಪಿ ಪಾಂಡುರಂಗ ತಲೆ ಮರೆಸಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಹಂದನಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ ಟಿ.ಎನ್.ನರಸಿಂಹಮೂರ್ತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್, ತಹಶೀಲ್ದಾರ್ ಮಂಜುನಾಥ್, ಸಿಪಿಐ ಸುರೇಶ್‍ಕುಮಾರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

 

(Visited 28 times, 1 visits today)

Related posts

Leave a Comment