ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ..!!!

ಬೆಂಗಳೂರು:

      ಟಿಪ್ಪು ಜಯಂತಿಗೆ ಮುನ್ನಾ ದಿನ ಪತ್ರಕರ್ತ ಸಂತೋಶ್ ತಮ್ಮಯ್ಯ ಅವರು ಟಿಪ್ಪು ಜಯಂತಿ ವಿರೋಧಿಸಿ ಭಾಷಣ ಮಾಡಿದ್ದರು.ಅದರ ಆಧಾರವಾಗಿಟ್ಟುಕೊಂಡು ಗೊಣಿಕೊಪ್ಪ ಪೊಲೀಸರು ಅವರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಲಾಗಿದೆ.

      ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸುವುದನ್ನು ಖಂಡಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂತೋಷ್ ತಮ್ಮಯ್ಯ, ಟಿಪ್ಪು ಮತಾಂಧತೆಗೆ ಕಾರಣವಾಗಿದ್ದ ಮನಸ್ಥಿತಿಯನ್ನು ವಿಮರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲಾಗಿತ್ತು. ಸಂತೋಷ್ ತಮ್ಮಯ್ಯ ಅವರನ್ನು ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಆಗಿತ್ತು. ಸಂತೋಷ್ ತಮ್ಮಯ್ಯ ಟಿಪ್ಪು ವಿರುದ್ಧ ಮಾತನಾಡಿದ್ದಕ್ಕೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ.

      ಪೋಸ್ಟ್ ಒಂದಕ್ಕೆ ಕಾಮೆಂಟಿಸಿರುವ ಸಂಘಗಳ ಸಂಹಾರ ಎಂಬ ಖಾತೆಯ ಪ್ರೊಫೈಲ್ ಸಂತೋಷ್ ತಮ್ಮಯ್ಯ ವಿರುದ್ಧ ಅವಹೇಳನಕಾರಿ ಶಬ್ದಗಳಲ್ಲಿ ನಿಂದಿಸಿದ್ದು, “ಸಂತೋಷ್ ನ್ನು ಒಂದು ತಿಂಗಳ ಒಳಗೆ ನಾವು ತೆಗೀತೀವಿ ನಿಮ್ಮ ಕೈಯಲ್ಲಿ ಏನು ಕಿಸಿಯೋಕೆ ಆಗುತ್ತೋ ಕಿಸಿಯಿರಿ ಎಂದು ಬರೆಯಲಾಗಿದೆ.

 

(Visited 6 times, 1 visits today)

Related posts

Leave a Comment