ಪರಮೇಶ್ವರ ಕರೆದಾಗ ಹೋಗಬೇಕು : ಹೆಚ್.ಡಿ. ದೇವೇಗೌಡ

ತುಮಕೂರು:

      ಈ ಪುಣ್ಯಕಾಲದಲ್ಲಿ ದರ್ಶನ ಮಾಡಲು ಬಂದೆ ದರ್ಶನ ಆಗಿದೆ. ಭಗವಂತ ಯಾವಾಗ ತೀರ್ಮಾನ ಮಾಡ್ತಾನೋ ನಮಗೆ ಗೊತ್ತಿಲ್ಲಾ. ಇನ್ನೂ ಉಸಿರಾಡುವ‌ಶಕ್ತಿ ಶ್ರಿ ಗಳಿಗೆ ಇದೆ. ಇಂಥ ದಿನವೇ ಅಂತಾ ನಾನು ಹೇಳಲು ಸಾಧ್ಯವಿಲ್ಲ.

ಪರಮೇಶ್ವರ ಕರೆದಾಗ ಹೋಗಬೇಕು ಎಂದು ಮಾಜಿ ಪ್ರಧಾನಿ , ಜೆಡಿಎಸ್ ರಾಷ್ಟ್ರೀಯ ಅದ್ಯಕ್ಷ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

      ಅವರು ಇಂದು ಶ್ವಾಸಕೋಶದ ತೊಂದರೆಯಿಂದಾಗಿ ಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವ   ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಡಾ||ಶ್ರೀ ಶಿವಕುಮಾರ ಸ್ವಾಮೀಜಿ ದರ್ಶನ ಮಾಡಿ ಶ್ರೀ ಗಳು ಶೀಘ್ರವಾಗಿ ಗುಣಮುಖ ರಾಗಲೆಂದು  ಆಶಿಸಿದರು. ಶ್ರೀ ಗಳಿಗೆ ನೀಡಲಾಗುವ ಚಿಕಿತ್ಸಾ ವಿಧಾನದ ಬಗ್ಗೆ ಕಿರಿಯ ಶ್ರೀ ಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ವೈದ್ಯರಿಂದ  ಅವರಿಂದ ಮಾಹಿತಿ ಪಡೆದರು. 
      ನಂತರ ಮಾದ್ಯಮ ದೂಂದಿಗೆ ಮಾತನಾಡಿ,ಗುರುಗಳಿಗೆ 111 ವರ್ಷವಾಗಿದೆ. ಹೀಗಾಗಿ ಸ್ವಾಭಾವಿಕವಾಗಿ ಅವರ ಆರೋಗ್ಯದಲ್ಲಿ ಏರು ಪೇರಾಗಿದೆ. ಸುಮಾರು 89 ವರ್ಷಗಳಿಗೂ ಅಧಿಕ ಕಾಲ ಅವರು ಮಠದಲ್ಲಿ ಸೇವೆ ಸಲ್ಲಿಸಿದ್ದು, ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ, ಅನ್ನ ದಾಸೋಹ ಮಾಡಿದ್ದಾರೆ. ಬಹುಷಃ ಇಷ್ಟು ವರ್ಷಗಳ ಕಾಲ ಒಂದು ಮಠದ ಪೀಠಾಧಿಪತಿಯಾಗಿ ಮತ್ತೊಬ್ಬರು ಸೇವೆ ಸಲ್ಲಿಸಿದ ಉದಾಹರಣೆ ಇಲ್ಲ. ಅವರು ಮೊದಲಿನಿಂದಲೂ ಪ್ರತಿಯೊಂದರಲ್ಲೂ ಈ ಕೊನೆ ಗಳಿಗೆವರೆಗೂ ಅಷ್ಟೇ ಚೈತನ್ಯದಿಂದ ಪಾಲ್ಗೊಂಡಿದ್ದಾರೆ. ಆದರೆ, ಪ್ರಕೃತಿ ಸಹಜವಾದಂಥ ಪ್ರಕ್ರಿಯೆ ಇದು. ಪುನರಪಿ ಜನನಂ ಅನ್ನೋ ಹಾಗೆ, ಶ್ರೀಗಳು ತಮ್ಮ ಸೇವಾ ಕಾರ್ಯದಿಂದಾಗಿ ಪರಮೇಶ್ವರನ ಸಾನಿಧ್ಯಕ್ಕೆ ಹೋಗಲು ದಾರಿ ಮಾಡಿಕೊಂಡಿದ್ದಾರೆ ಅನಿಸುತ್ತೆ ಎಂದರು.
      ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಅದ್ಯಕ್ಷ ಮಾಜಿ ಸಚಿವ ಹೆಚ್.ವಿಶ್ವನಾಧ್, ಸಚಿವ ಎಸ್.ಆರ್. ಶ್ರೀ ನಿವಾಸ್, ವಿದಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಬೆಮೆಲ್ ಕಾಂತರಾಜ್, ಮತ್ತಿತರರು ಹಾಜರಿದ್ದರು.
(Visited 265 times, 1 visits today)

Related posts

Leave a Comment