ಪುಷ್ಪಾ ಅಮರ್​ನಾಥ್​ಗೆ ಒಲಿದ ಮಹಿಳಾ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ

ಬೆಂಗಳೂರು:

      ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೊಕ್ ನೀಡಲಾಗಿದ್ದು, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಸ್ಥಾನಕ್ಕೆ ನೂತನವಾಗಿ ಪುಷ್ಟ ಅಮರನಾಥ್ ಅವರು ನೇಮಕವಾಗಿದ್ದಾರೆ.

      ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಪಾಲಿಸಿರುವ ಕಾಂಗ್ರೆಸ್​ ಪಕ್ಷ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಬಳಿಯಿದ್ದ ರಾಜ್ಯ ಮಹಿಳಾ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನವನ್ನು ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್​ ಅವರಿಗೆ ವಹಿಸಿದೆ.

       ಪುಷ್ಪಾ ಅವರು ಮೈಸೂರು ನಗರದವರಾಗಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಸಿದ್ದರಾಮಯ್ಯ ಅವರ ಬೆಂಬಲಿಗರಾಗಿ ಇವರು ಗುರುತಿಸಿಕೊಂಡಿದ್ದರು.

       ಇದರಿಂದಾಗಿ ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ಮೇಲುಗೈ ಆಗಿದೆ.

 

(Visited 13 times, 1 visits today)

Related posts