ಪ್ರತಿಯೊಬ್ಬರಿಗೂ ಸೂರು ಯೋಜನೆಯಡಿ 400 ಮನೆಗಳ ನಿರ್ಮಾಣ

ಚಿಕ್ಕನಾಯಕನಹಳ್ಳಿ :

       ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರತಿಯೊಬ್ಬರಿಗೂ ಸೂರು ಎನ್ನುವ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಕಲ್ಲೇನಹಳ್ಳಿ ಬಳಿ ನೂತನವಾಗಿ ಎರಡು ಎಕರೆಯಲ್ಲಿ 400ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಲಾಗುವುದು ಎಂದು ಸಾಯಿರಾಂ ಹೌಸಿಂಗ್ ಕಂಪನಿಯ ನಿರ್ದೇಶಕ ವಿವೇಕಾನಂದ ಶೆಟ್ಟಿ ತಿಳಿಸಿದರು.

      ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ವಸತಿ ಸಮುಚ್ಚಯ ಆಸ್ಪತ್ರೆಗಳು ನಿರ್ಮಾಣ ಮಾಡಿದ್ದೇವೆ ವಸತಿ ಸಮುಚ್ಛಯ ನಿರ್ಮಿಸಲು ಒಟ್ಟು 7.25 ಸಾವಿರ ಬೆಲೆಯಲ್ಲಿ ಮನೆಗಳು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾಋ 2.65 ಲಕ್ಷರೂ ಸಬ್ಸಿಡಿ ನೀಡುತ್ತಿದೆ ಉಳಿದ ಹಣವನ್ನು ಬ್ಯಾಂಕ್‍ಗಳ ಮೂಲಕ ಸಾಲದ ರೂಪದಲ್ಲಿ ಹಣ ನೀಡುತ್ತಿದ್ದು, ಇದಕ್ಕೆ ಬ್ಯಾಂಕ್ ಖಾತೆ ಹಾಗೂ ಆಧಾರ್‍ಕಾರ್ಡ್ ಇದ್ದರೆ ಸಾಕು ವಸತಿ ರಹಿತರಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಈ ಯೋಜನೆ ಮಾರ್ಚ್‍ನಲ್ಲಿ ಪ್ರಾರಂಭಿಸಿ 18 ತಿಂಗಳ ಒಳಗೆ ಪೂರ್ಣಗೊಳಿಸಿ ನೀಡಲಾಗುವುದು ಎಂದರು.

      ಈ ಸಂದರ್ಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಕಾರ್ಯಕ್ರಮ ಉದ್ಘಾಟಿಸಿದರು. ಪ್ರದೀಪ್‍ಶೆಟ್ಟಿ, ಸುದೇಶ್‍ಹೆಗ್ಡೆ, ಕೆ.ಜಿ.ಕೃಷ್ಣೇಗೌಡ, ಮತ್ತಿತರರು ಉಪಸ್ಥಿತರಿದ್ದರು.

(Visited 16 times, 1 visits today)

Related posts