ಪ್ರೀತಿಸಿದ್ದ ಅಪ್ರಾಪ್ತ ಪ್ರೇಮಿಗಳಿಬ್ಬರು ನೇಣಿಗೆ ಶರಣು?

ತುಮಕೂರು: 

      ಅಪ್ರಾಪ್ತ ಪ್ರೇಮಿಗಳಿಬ್ಬರು ನೇಣಿಗೆ ಶರಣಾದ ಘಟನೆ ಮಧುಗಿರಿ ತಾಲೂಕಿನ ಸುದ್ದೇಗುಂಟೆ ಗ್ರಾಮದ ಹೊರವಲಯದಲ್ಲಿ ಗುರುವಾರ ನಡೆದಿದೆ.

      ಸಂದೇಶ್(17), ಮೀನಾಕ್ಷಿ(17) ಮೃತ ಪ್ರೇಮಿಗಳು. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬದವರಿಗೆ ಹೆದರಿ ಗ್ರಾಮದ ಹೊರಭಾಗದ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು‌ ಶಂಕಿಸಲಾಗಿದೆ.

      ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪಿಎಸ್ಐ ಮೋಹನ್ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

(Visited 9 times, 1 visits today)

Related posts

Leave a Comment