ಪಾವಗಡ :
ತಾಲ್ಲೂಕಿನ ಗಡಿ ಭಾಗದ ನಕ್ಸಲ್ ಪೀಡಿತ ಪ್ರದೇಶವಾದ ಎನ್.ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಗುರುವಾರ ರಾತ್ರಿ ಶಾಲಾ ವಾಸ್ತವ್ಯ ಹೂಡಿದರು.
ಸಂಜೆ 6.30 ಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮದ ಹೆಬ್ಬಾಗಿಲಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ಕುಂಭಮೇಳದೊಂದಿಗೆ ಸ್ವಾಗತ ಕೋರಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಅಮೂಲಾಗ್ರವಾಗಿ ಮಾತುಕತೆ ನಡೆಸಿದ್ದೇನೆ. ಪ್ರಮುಖವಾಗಿ ಗ್ರಾಮಾಂತರ ಭಾಗಗಳ ಶಾಲೆಗಳಲ್ಲಿ ಇರುವ ಸಮಸ್ಯೆಗಳು ಗಮನಕ್ಕೆ ಬಂದಿವೆ. ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಶಿಕ್ಷಕರ ನೇಮಕಮಾಡಬೇಕು ಎನ್ನುವ ಬೇಡಿಕೆ ಬಂದಿದ್ದು ಮಾನ್ಯ ಪ್ರಧಾನ ಮಂತ್ರಿಗಳು ಫಿಟ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಇದೇ ಉದ್ದೇಶದಿಂದ ಎಂದರು.
ಇಂಗ್ಲೀಷ್ ಮಿಡಿಯಂ ಶಾಲೆಗಳನ್ನು ಹೆಚ್ಚಿಸಲು ಗಮನಹರಿಸಲಾಗುವುದು. ವರ್ಗಾವಣೆಯಲ್ಲಿ ಕೆಲ ಸಮಸ್ಯೆಗಳಿಂದ ಬಳಲುತ್ತಿರುವ ಶಿಕ್ಷಕರನ್ನು ಕಂಡಿದ್ದೇನೆ. ಅಂತಹವರ ವರ್ಗಾವಣೆ ಕೋರಿ ಬಂದಾಗ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ.
ನಗರ ಪ್ರದೇಶದಲ್ಲಿ ಸಾವಿರಾರು ಮಕ್ಕಳಿದ್ದನ್ನು ಕಂಡಿರುವೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರತಿ ಗ್ರಾಮದಲ್ಲಿನ ಕೂಲಿ ಕಾರ್ಮಿಕರು ಕೂಡ ತಮ್ಮ ಮಕ್ಕಳನ್ನು ಇಂಗ್ಲೀಪ್ ಮಾಧ್ಯಮದಲ್ಲಿ ಓದಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆಂದರೆ, ನಾವೆಲ್ಲ ಕನ್ನಡ ಮಾಧ್ಯಮದಲ್ಲಿ ಓದಿದರೂ ತಮ್ಮ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಮುಂದಿನ ಸವಾಲುಗಳನ್ನು ಎದುರಿಸುವ ಶಕ್ತಿಪಡೆಯಬೇಕಾಗಿದೆ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಡಿಡಿಪಿಐ ರವಿಶಂಕರ್ ರೆಡ್ಡಿ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದು ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಪ್ರಸ್ತುತ 113 ಗಡಿಭಾಗದ ಶಾಲೆಗಳಿದ್ದು, 1.31 ¯ಕ್ಷ ಮಕ್ಕಳು ಈ ಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ 19 ಇಂಗ್ಲೀಷ್ ಶಾಲೆಗಳನ್ನ ತೆರೆಯಲಾಗಿದ್ದು ಹೆಚ್ಚಿನ ಶಾಲೆಗಳನ್ನ ಹೆಚ್ಚಿಸಲು ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ. ಎನ್.ಅಚ್ಚಮ್ಮನಹಳ್ಳಿಯಲ್ಲೂ ಇಂಗ್ಲೀಷ್ ಶಾಲೆಯನ್ನ ತೆರೆಯಲು ಗ್ರಾಮಸ್ಥರು ಮನವಿ ಮಾಡಿದ್ದು, ಸಚಿವರು ಈ ಭಾಗದ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಲ್ಲಿ ಹೆಚ್ಚಿನ ಅನುದಾನ ಮೀಸಲಿರಿಸಬೇಕು ಎಂದು ಮನವಿ ಮಾಡಿದರು.
ಭಾರತಕ್ಕೆ ಯುರೋಪಿಯನ್ನರು ಬಂದು ಹೋದಾಗ ಗಾಂಧೀಜಿಯವರನ್ನ ನೋಡಿದ್ದೇವೆ ಎಂದಿದ್ದರು. ಪಾವಗಡ ಮತ್ತು ತುಮಕೂರಿನ ಜನ ಇಲ್ಲಿಗೆ ಬಂದಿದ್ದಾರೆ. ಸರ್ಕಾರದ ಶಿಕ್ಷಣ ಸಚಿವರೇ ಈ ರಾಜ್ಯದ ಉದ್ದಗಲಕ್ಕೂ ರಾಜ್ ಕುಮಾರ್, ಸಾಂಬ ಸದಾಶಿವರೆಡ್ಡಿ ತಾಲೂಕು ಬಿಜೆಪಿ ಅಧ್ಯಕ್ಷ ಗಿರೀಶ್ ಮತ್ತಿತರರು ಇದ್ದರು.
ಗುಡ್ ಈವನಿಂಗ್ ಮಿನಿಸ್ಟರ್ ಸರ್.. ಎಂದು ಹೇಮಂತ ನಾಯ್ಡು ಎಂಬ 7 ನೇ ತರಗತಿ ವಿದ್ಯಾರ್ಥಿ ಸಚಿವರೊಂದಿಗೆ ಸಂವಾದ ನಡೆಸಿದ. ತಿರುಮಣಿ ಸುತ್ತಾ 7 ಗ್ರಾಮಗಳಿವೆ ಸೋಲಾರ್ ಪ್ಲಾಂಟ್ ಇದೆ. ಆದ್ರೆ ನಮಗೆ ಕರೆಂಟ್ ಇರಲ್ಲ ಎಂದು ಮನವಿ ಮಾಡಿದರು. ಸಮುದ್ರದ ನೆಂಟಸ್ತನ ಉಪ್ಪಿಗೆ ಬರ ಎನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ. ರಸ್ತೆ ಹಾಗೂ ಬೆಳಕಿನ ಬಗ್ಗೆ ಆದ್ಯv Éಮೇರೆಗೆ ತೆಗೆದುಕೊಳ್ಳಲಾಗುವುದು ಎಂದು ಸಚಿವರು ವಿದ್ಯಾರ್ಥಿಗೆ ಸಮಾಧಾನ ಪಡಿಸಿದರು.
7 ನೇ ತರಗತಿ ವಿದ್ಯಾರ್ಥಿ ವಾಸವಿ ಪ್ರಶ್ನೆ ಕೇಳಿ, ನಮ್ಮೂರಿನಲ್ಲಿ ಆಂಗ್ಲ ಶಾಲೆಯಿದ್ದು ಹೆಚ್ಚಿನ ವಿದ್ಯಾರ್ಥಿಗಳು ಅಪ್ಲಿಕೇಷನ್ ಹಾಕಿದ್ದರು 30 ಜನರಿಗೆ ಮಾತ್ರ ಸಿಕ್ಕಿದೆ ಎಂದು ತಿಳಿಸಿದಳು. ತಿರುಮಣಿಯಿಂದ ಅಚ್ಚಮನಹಹಳ್ಳಿಗೆ ನಡೆದುಕೊಂಡು ಹೋಗಬೇಕು ಎಂದು ಒಂದನೇತರಗತಿ ವಿದ್ಯಾರ್ಥಿ ಹೇಳಿದರು. ಇನ್ನು ಕೆಲ ವಿದ್ಯಾರ್ಥಿಗಳು ಫಿಲ್ಟರ್ ಘಟಕಗಳ ತೆರೆಯಬೇಕು. ನಮ್ಮ ಶಾಲೆಯಲ್ಲಿ ಶಿಕ್ಷಕರಿಲ್ಲ. ಇನ್ನೂ ನಮ್ಮ ಶಾಲೆಗೆ ಕಂಪ್ಯೂಟರ್ ಇಲ್ಲ, ಗಣಿತ ಶಿಕ್ಷಕರಿಲ್ಲ, ದೈಹಿಕ ಶಿಕ್ಷಕರಿಲ್ಲ ಎಂದು ಸಚಿವರಲ್ಲಿ ತಿಳಿಸಿದರು.
ಮಕ್ಕಳ ಬಳಿಯೇ ತೆರಳಿದ ಸಚಿವರು ಪ್ರತಿಯೊಂದು ಪ್ರಶ್ನೆಯನ್ನ ಅಧಿಕಾರಿಗಳಿಗೆ ಬರೆದುಕೊಳ್ಳಲು ಸೂಚಿಸಿದ್ದಲ್ಲದೆ ಪ್ರತಿಯೊಂದು ಸಮಸ್ಯೆಗೂ ಶೀಘ್ರದಲ್ಲಿ ಬಗೆಹರಿಸುವುದಾಗಿ ಹೇಳಿದರು.
ಜಿ.ಪಂ. ಉಪಾದ್ಯಕ್ಷೆ ಶಾರದ ನರಸಿಂಹಮೂರ್ತಿ, ತಹಶೀಲ್ದಾರ್ ವರದರಾಜು, ತಾ.ಪಂ ಅಧ್ಯಕ್ಷ ಸೊಗಡುವೆಂಕಟೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಚನ್ನಮಲ್ಲಯ್ಯ, ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಮಧುಗಿರಿ ಡಿಡಿಪಿಐ ರವಿಶಂಕರ್ ರೆಡ್ಡಿ, ಬಿಇಒ ಸಿದ್ಧಗಂಗಯ್ಯ ಮಧುಗಿರಿ ಎಸಿ ಚಂದ್ರಶೇಖರಯ್ಯ, ಡಿವೈಪಿಸಿ ರಾಜಕುಮಾರ್ ಇದ್ದರು.
ನಂತರ ಸಚಿವರು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ತಡರಾತ್ರಿಯವರೆಗೂ ಶಿಕ್ಷಕರು ಹಾಗೂ ಪೋಷಕರ ಜೊತೆ ಮಾತುಕತೆ ನಡೆಸಿ ಭೋಜನ ಸ್ವೀಕರಿಸಿ ವಾಸ್ತವ್ಯ ಮಾಡಿದರು.