ಫ್ಲೈ ಓವರ್‌ ಮೇಲೆ ಇನೋವಾ ಕಾರು ಪಲ್ಟಿ ;ಟ್ರಾಫಿಕ್‌ ಜಾಮ್‌

ಬೆಂಗಳೂರು:

      ನಗರದ ಹೆಬ್ಬಾಳ ಫ್ಲೈ ಓವರ್‌ನಲ್ಲಿ ಓವರ್‌ಟೇಕ್‌ ಮಾಡುತ್ತಿದ್ದ ವೇಳೆ ಇನೋವಾ ಕಾರೊಂದು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

      ಅವಘಡದಲ್ಲಿ ಗಾಯಗೊಂಡ ಓರ್ವನ ಸ್ಥಿತಿ ಗಂಭೀರವಾಗಿದೆ. ಕಾರಿನಲ್ಲಿ  ದೇವನಹಳ್ಳಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

      ಘಟನೆಯ ಬಳಿಕ ಹೆಬ್ಬಾಳ ಮೇಲ್ಸೇತುವೆಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಹೆಬ್ಬಾಳ ಸಂಚಾರಿ ಠಾಣೆಯ ಪೊಲೀಸರು ಟ್ರಾಫಿಕ್‌ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. 

 

(Visited 12 times, 1 visits today)

Related posts

Leave a Comment