ಬಸ್​​ಗೆ ಲಾರಿ ಡಿಕ್ಕಿ: ಮೂವರು ವಿದ್ಯಾರ್ಥಿಗಳಿಗೆ ಗಾಯ

ತುಮಕೂರು: 

      ಸಮೀಪದ ಎನ್.ಎಚ್.48ರ ಊರುಕೆರೆ ಬಳಿ ರಸ್ತೆ ಮಧ್ಯೆೆ ಕೆಟ್ಟು ನಿಂತಿದ್ದ ಈರುಳ್ಳಿ ತುಂಬಿದ್ದ ಲಾರಿಗೆ ಹಿಂದಿನಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

       ಊರುಕೆರೆಯ ಸಮೀಪದ ಜೈನ್ ಪಬ್ಲಿಕ್ ಶಾಲೆ ಬಳಿ ರಸ್ತೆ ಮಧ್ಯೆ ಲಾರಿ ಕೆಟ್ಟು ನಿಂತಿತ್ತು. ಈ ವೇಳೆ ಶಿರಾ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಮುಂಭಾಗ ಕುಳಿತಿದ್ದ ಮೂವರು ಪ್ರಯಾಣಿಕರು ಕಬ್ಬಿಣದ ಸರಳಿಗೆ ಸಿಲುಕಿಕೊಂಡಿದ್ದಾರೆ. ನಂತರ ಕಬ್ಬಿಣವನ್ನು ಕತ್ತರಿಸಿ ಸಿಲುಕಿಕೊಂಡಿದ್ದವರನ್ನು ಹೊರ ತೆಗೆದು ಜಿಲ್ಲಾಸ್ಪತ್ರೆೆಗೆ ದಾಖಲಿಸಿಲಾಗಿದೆ.

      ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆ ಎಸ್‌ಐ ಶ್ರೀನಿವಾಸ್, ವೃತ್ತ ನಿರೀಕ್ಷಕ ಮಧುಸೂಧನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತ ಸಂಭವಿಸಿದ ನಂತರ ಈ ಭಾಗದ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಲಾರಿ ಹಾಗೂ ಬಸನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

(Visited 9 times, 1 visits today)

Related posts

Leave a Comment