ಬೆಸ್ಕಾಂ ಕುಣಿಗಲ್ ವಿಭಾಗದಿಂದ ವಿದ್ಯುತ್ ಸುರಕ್ಷತಾ ಸಪ್ತಾಹ ಆಚರಣೆ

 ತುಮಕೂರು:

      ಬೆಸ್ಕಾಂ ಕುಣಿಗಲ್ ವಿಭಾಗ ಕಚೇರಿಯಲ್ಲಿ ಇಂದು ವಿದ್ಯುತ್ ಅಪಘಾತ ತಡೆಯುವ ನಿಟ್ಟಿನಲ್ಲಿ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

      ಕಾರ್ಯಕ್ರಮವನ್ನು ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜು ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಇಲಾಖೆಯ ಸಿಬ್ಬಂದಿ ವರ್ಗದವರು, ತಾವು ಕಾರ್ಯನಿರ್ವಹಿಸುವ ವೇಳೆ ಇಲಾಖೆ ನೀಡಿರುವ ಸುರಕ್ಷತಾ ಸಾಧನಗಳನ್ನು ಬಳಸಿಕೊಂಡು, ಅಪಘಾತರಹಿತ ಕಾರ್ಯನಿರ್ವಹಣೆಗೆ ಒತ್ತು ನೀಡುವಂತೆ ಸಲಹೆ ನೀಡಿದರು.

      ಈಗಾಗಲೇ ನೌಕರರಿಗೆ ಹರ್ತರಾಡ್,ಹೆಲ್ಮೇಟ್‍ಗಳು,ಸೇಪ್ಟಿ ಶೂ, ಕಟ್ಟಿಂಗ್ ಪ್ಲೇಯರ್,ಸೇಪ್ಟಿ ಬೆಲ್ಟ್ ಅಳವಡಿಸಿಕೊಂಡು, ವಿದ್ಯುತ್ ಮಾರ್ಗಮುಕ್ತಗೊಳಿಸಿ ಕೆಲಸ ಮಾಡುವುದರಿಂದ ಶೇ100ಕ್ಕೆ ನೂರಷ್ಟು ವಿದ್ಯುತ್ ಅವಘಡಗಳನ್ನು ತಡೆ ಹಿಡಿಯ ಬಹುದಾಗಿದೆ.ಆದ್ದರಿಂದ ನೌಕರರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಇಲಾಖೆಯನ್ನು ಅಪಘಾತ ರಹಿತ ಸಂಸ್ಥೆಯನ್ನಾಗಿಸಲು ಮುಂದಾಗುವಂತೆ ಮನವಿ ಮಾಡಿದರು.

      ಲೆಕ್ಕಾಧಿಕಾರಿ ಬಿ.ವಿ.ನಾಗರಾಜು ಮಾತನಾಡಿ,ಇಲಾಖೆಯಲ್ಲಿ ನೌಕರರ ಸುರಕ್ಷತೆ ಕುರಿತಂತೆ ಆಗಿಂದಾಗ್ಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ಆದರೂ ಸಹ ಅಪಘಾತಗಳು ನಡೆಯುತ್ತಲೇ ಇವೆ.ನೌಕರರು ಹಿರಿಯ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸದೆ, ಅನುಸರಿಸುವ ಮೂಲಕ ತಮ್ಮ ಜೀವ ರಕ್ಷಣೆಯ ಜೊತೆಗೆ, ತಮ್ಮ ಕುಟುಂಬದ ರಕ್ಷಣೆಯನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು.

      ಬೆವಿಕಂ ವಿಭಾಗೀಯ ಸಮಿತಿಯ ಅಧ್ಯಕ್ಷರಾದ ಕಿರಿಯ ಇಂಜಿನಿಯರ್ ರವೀಂದ್ರ.ಎಂ.ಜೆ.ಮಾತನಾಡಿ,ವಿದ್ಯುತ್ ಸಂಪರ್ಕ ಕುರಿತಂತೆ ಇಲಾಖೆಗೆ ದೂರುಗಳು ಬರುವುದು ಸಹಜ.ಅದರಲ್ಲಿಯೂ ಮಳೆಗಾಲದಲ್ಲಿ ದೂರಗಳ ಸಂಖ್ಯೆ ಹೆಚ್ಚಳ.ಆದರೆ ನೌಕರರು ಗ್ರಾಹಕರಿಗೆ ತಡೆರಹಿತ ವಿದ್ಯುತ್ ನೀಡಬೇಕೆಂಬ ಆಶಯದಲ್ಲಿ ಆತುರದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಕೆಲಸ ಮಾಡಬಾರದು.ಇದರಿಂದ ಇಲಾಖೆಗೂ ನಷ್ಟ.ಅಪಘಾತರಹಿತ ಇಲಾಖೆಯನ್ನಾಗಿಸಲು ಸುರಕ್ಷತಾ ಸಾಧನೆಗಳನ್ನು ಬಳಸುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕು.ಸಹಾಯಕ ಮಾರ್ಗದಾಳು, ಯಂತ್ರಕರ್ಮಿಗಳು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಕಿರಿಯ ಮಾರ್ಗದಾಳುಗಳಿಗೆ ಕೆಲಸವನ್ನು ಕಲಿಸಿಕೊಡುವಂತೆ ಸಲಹೆ ನೀಡಿದರು.

      ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ಉಪಾಧ್ಯಕ್ಷರಾದ ಹೆಚ್.ಎನ್.ಶ್ರೀನಿವಾಸಗೌಡ ನೌಕರರಿಗೆ ಸುರಕ್ಷತಾಮಂತ್ರ ಬೋಧಿಸಿದರು.ವೇದಿಕೆಯಲ್ಲಿ ಹಿರಿಯ ಸಹಾಯಕರಾದ ನಾಗರಾಜಪ್ಪ, ಎ.ಇಇಗಳಾ ವೀರಭದ್ರಾಚಾರ್, ಕೆ.ಎನ್.ವೆಂಕಟೇಶ್, ಸಹಾಯಕ ಇಂಜಿನಿಯರ್,ಶಾಖಾಧಿ ಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.ಬೆವಿಕಂ ಕುಣಿಗಲ್ ಉಪವಿಭಾಗದ ಯಡಿಯೂರು,ಕುಣಿಗಲ್, ಹುಲಿಯೂರು ದುರ್ಗ ಉಪವಿಭಾಗದ ನೌಕರರು ಹಾಜರಿದ್ದರು.

 

(Visited 39 times, 1 visits today)

Related posts

Leave a Comment