ಭಯೋತ್ಪಾದಕರ ಗುಂಡಿನ ಚಕಮಕಿಗೆ ಮೂವರು ಪೊಲೀಸರು ಬಲಿ

ಶ್ರೀನಗರ: 

      ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶಂಕಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಮೂವರು ಪೋಲಿಸರು ಹುತ್ಮಾತರಾಗಿದ್ದಾರೆ.

      ಈ ಪ್ರದೇಶದಲ್ಲಿನ ಝೈನ್‌ಪೋರಾದಲ್ಲಿ ಕಾವಲು ಕಾಯುತ್ತಿದ್ದ ನಾಲ್ವರು ಪೋಲಿಸರಿದ್ದರು. ಇಲ್ಲಿಗೆ ನುಗ್ಗಿದ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಮೂರು ಮಂದಿ ಪೋಲಿಸರು ಸ್ಥಳದಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೋಲಿಸ್‌‌ ಅಧಿಕಾರಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

      ದಾಳಿ ಬಳಿಕ ಪೋಲಿಸರ ಬಳಿಯಿದ್ದ ಎಲ್ಲ ಶಸ್ತ್ರಾಸ್ತ್ರಗಳನ್ನು ಪೋಲಿಸರು ಹೊತ್ತೊಯ್ದಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ.

(Visited 9 times, 1 visits today)

Related posts

Leave a Comment