ಭಿಕ್ಷುಕರಂತೆ ಅನ್ನ ಬೇಡುವ ದುಸ್ಥಿತಿ ವಲಸೆ ಕಾರ್ಮಿಕರದ್ದು

ಪಾವಗಡ :

      ತುಂಗಭದ್ರಾ ಕುಡಿ ಯುವ ನೀರಿನ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಕಳೆದ 50 ದಿನಗಳಿಂದ ಆಹಾರವಿಲ್ಲ. ಪ್ರತಿದಿನ ತಿಂಡಿ ಊಟಕ್ಕಾಗಿ ಸಮೀಪದ ಬೆಳ್ಳಿಬೆಟ್ಲು ಮತ್ತು ಶೈಲಾಪುರ ಗ್ರಾಮಗಳಿಗೆ ಅಲೆದಾಡುತ್ತಿರುವುದು ಮನಕಲಕುವಂತಿದೆ.

      ಸುಮಾರು 2,350 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿ ಕೆಲಸ ಮಾಡಲು ಬಂದಿದ್ದರು. ಆದರೆ ಈ ಲಾಕ್‍ಡೌನ್‍ಯಿಂದಾಗಿ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಇವರು ಸ್ವಗ್ರಾಮಗಳಿಗೆ ತೆರಳುತ್ತೇವೆ ಎಂದು ಮನವಿ ಮಾಡಿದರೆ ಗುತ್ತಿಗೆದಾರರಿಂದಲೇ ಹಲ್ಲೆಯತ್ನ ನಡೆಯುತ್ತದೆ. ಈ ರೀತಿಯ ಹತ್ತು ಹಲವು ಚಿತ್ರಹಿಂಸೆ ಅನುಭವಿಸುತ್ತಾ ಕಳೆದ 4 ತಿಂಗಳಿಂದ ವೇತನವಿಲ್ಲದೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವಲಸೆ ಕಾರ್ಮಿಕರಿಂದ ಕೇಳಿ ಬರುತ್ತಿದೆ. ತಮಗೆ ಸೂಕ್ತ ಭದ್ರತೆಯನ್ನು ನೀಡುವಂತೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.

       ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೆಲಸಕ್ಕಾಗಿ ಉತ್ತರ ಪ್ರದೇಶದಿಂದ ಬಂದು ಕಾಮಗಾರಿ ಮಾಡುತ್ತಿರುವ 9 ಕಾರ್ಮಿಕರು ಕೊರೊನಾ ಲಾಕ್‍ಡೌನ್ ಘೋಷಣೆ ಆದ ನಂತರ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಸ್ವಂತ ಊರಿಗೆ ಹೋಗುತ್ತೇವೆ ಎಂದರೆ ಗುತ್ತಿಗೆದಾರರು ಬಿಡುತ್ತಿಲ್ಲ. ಇಲ್ಲೇ ಉಳಿಸಿಕೊಂಡರೂ ಯಾವುದೇ ಸೌಕರ್ಯ ನೀಡದೆ ಪಡಿತರಕ್ಕೆ ಹಣವನ್ನೂ ನೀಡುತ್ತಿಲ್ಲ. ಕಾರ್ಮಿಕರು ಸಮೀಪದ ಬೆಳ್ಳಿಬೆಟ್ಲುಹಾಗೂ ಶೈಲಾಪುರ ಗ್ರಾಮದಲ್ಲಿಭಿಕ್ಷುಕರಂತೆ ಅನ್ನ ಬೇಡುವ ದುಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಂಡು ಅವರಿಗೆ ವ್ಯವಸ್ಥೆ ಮಾಡಬೇಕಿದೆ.

(Visited 4 times, 1 visits today)

Related posts

Leave a Comment