ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀಗಳು

ತುಮಕೂರು:

      ಸಿದ್ಧಗಂಗೆಯ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿಗಳು ಇಂದು ಚೆನ್ನೈನ ರೇಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ವಿಶೇಷ ಆಂಬುಲೆನ್ಸ್​ನಲ್ಲಿ ಇಂದು ಮಠಕ್ಕೆ ಮರಳಿದ್ದಾರೆ.

      ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಠಕ್ಕೆ ಆಗಮಿಸಿದ ಶ್ರೀಗಳು ನೇರವಾಗಿ ಹಳೇ ಮಠದ‌ ಕೊಠಡಿಗೆ ತೆರಳಿದರು. ಶ್ರೀಗಳನ್ನು ನೋಡುವುದಕ್ಕೆ ಮಠದ ವಿದ್ಯಾರ್ಥಿಗಳು, ಲಕ್ಷಾಂತರ ಭಕ್ತಾದಿಗಳು ಉರಿಬಿಸಿಲನ್ನು ಲೆಕ್ಕಿಸದೇ ಶ್ರೀ ಮಠದ ಆವರಣದಲ್ಲಿ ಶ್ರೀಗಳ ಬರುವಿಕೆಗಾಗಿ ಕಾಯ್ದು ಶ್ರೀಗಳನ್ನು ನೋಡಿ ಸಂತೋಷಪಟ್ಟರು.

      ಇನ್ನು ಮುಂದಿನ 15 ದಿನ ಸ್ವಾಮೀಜಿ ದರ್ಶನಕ್ಕೆ ಮಠದಲ್ಲಿ ಅವಕಾಶವಿಲ್ಲ ಎನ್ನಲಾಗಿದ್ದು, ಸ್ವಾಮೀಜಿ ಆರೋಗ್ಯವಾಗಿದ್ದು ಇಷ್ಟಲಿಂಗ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸುತ್ತಾರೆ, ಮುಂದಿನ 15 ದಿನ ಸ್ವಾಮೀಜಿ ದರ್ಶನಕ್ಕೆ ಮಠದಲ್ಲಿ ಅವಕಾಶವಿಲ್ಲ, ಸ್ವಾಮೀಜಿ ಆರೋಗ್ಯವಾಗಿದ್ದು ಇಷ್ಟಲಿಂಗ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸುತ್ತಾರೆ. ಗಣ್ಯರು, ಭಕ್ತರು ದರ್ಶನಕ್ಕೆ ಕೆಲವು ದಿನ ಬರಬಾರದು ಎಂದು ಮನವಿ ಮಾಡುತ್ತೇನೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

 

 

 
(Visited 25 times, 1 visits today)

Related posts

Leave a Comment