ಮತ್ತೆ ‌ಜೈಲು ಸೇರಿದ ರೆಡ್ಡಿ

ಬೆಂಗಳೂರು:

     ‘ಇ.ಡಿ ಡೀಲ್’ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಭಾನುವಾರ ಸಂಜೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ (ಯುಟಿಪಿ) 10,902 ನೀಡಲಾಗಿದೆ.

     ರೆಡ್ಡಿ ಹಾಗೂ ಅವರ ಆಪ್ತಸಹಾಯಕ ಆಲಿಖಾನ್ ಹಿಂದೆ ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಆಗ ಅವರನ್ನು ‘ವಿಶೇಷ ಭದ್ರತೆ’ಯ ಕೊಠಡಿಯಲ್ಲಿ ಬಂಧಿಸಿಡಲಾಗಿತ್ತು. ರೆಡ್ಡಿ ಈಗ ಮತ್ತೆ ಅದೇ ಕೊಠಡಿ ಸೇರಿದ್ದಾರೆ.  

      ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಬಲವಾದ ಸಾಕ್ಷ್ಯಗಳನ್ನು ಒಪ್ಪಿಸಿದ್ದಾರೆ. ಈ ಹಿನ್ನೆೆಲೆಯಲ್ಲಿ ನ್ಯಾಯಾಧೀಶರು, ರೆಡ್ಡಿ ಪರ ವಕೀಲ ಚಂದ್ರಶೇರ್ ಅವರ ವಾದವನ್ನು ತಿರಸ್ಕರಿಸಿ, ನ್ಯಾಯಾಂಗ ಬಂಧನಕ್ಕೆೆ ಆದೇಶಿಸಿದ್ದಾರೆ.

(Visited 9 times, 1 visits today)

Related posts

Leave a Comment