ಮಧುಗಿರಿ : ಮಾನವೀಯತೆ ಮೆರೆದ ತಹಶೀಲ್ದಾರ್

ಮಧುಗಿರಿ :
      ದ್ವಿಚಕ್ರ ವಾಹನ ಸವಾರನೊಬ್ಬ ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದಿದನ್ನು ಕಂಡು ತಹಶೀಲ್ದಾರ್ ಡಾ. ಜಿ. ವಿಶ್ವನಾಥ್ ರವರು ವಾಹನ ಸವಾರನಿಗೆ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.
      ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮಕ್ಕೆ ಕಾರ್ಯದ ನಿಮಿತ್ತ ಭೇಟಿ ನೀಡುವಾಗ ಮರಬಹಳ್ಳಿ ಕೋಡಗದಾಲ ಗ್ರಾಮಗಳ ಮಧ್ಯೆ ಹಾದುಹೋಗಿರುವ ಗೌರಿಬಿದನೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ.
      ರಸ್ತೆಯಲ್ಲಿ ಬಿದ್ದಂತಹ ದ್ವಿಚಕ್ರವಾಹನವನ್ನು ಮೇಲಕ್ಕೆತ್ತಿ ವಾಹನ ಸವಾರನ ಯೋಗಕ್ಷೇಮ ವಿಚಾರಿಸಿ ಸವಾರನ ಸಂಭಂಧಿಕರಿಗೆ ದೂರವಾಣಿ ಕರೆ ಮಾಡಿ ಸಣ್ಣ ಪುಟ್ಟ ಗಾಯಾಗಳಾಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
       ಸರಳ ಸಜ್ಜನಿಕೆಯ ಸರ್ಕಾರಿ ಅಧಿಕಾರಿಯಾಗಿರುವ ತಹಶೀಲ್ದಾರ್ ರವರು ಬಡ ಕುಟುಂಬದಿಂದ ಬಂದವರಾಗಿದ್ದು, ಸರ್ಕಾರಿ ಸೇವೆಗೂ ಮೊದಲು ತಮ್ಮ ಪದವಿ ಪೂರ್ವ ವಿದ್ಯಾಭ್ಯಾಸದ ಸಮಯದಲ್ಲಿ ಪತ್ರಿಕೆಗಳನ್ನು ಹಂಚುವ ಕೆಲಸ ಮಾಡಿದ್ದರು. ಇವರು ತಾಲ್ಲೂಕಿನಲ್ಲಿ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಜನ ಸ್ನೇಹಿ ಅಧಿಕಾರಿಯಾಗಿದ್ದಾರೆ.ತಹಶಿಲ್ದಾರರ ವಿಶ್ವನಾಥ ರವರಿಗೆ ಜೊತೆಯಲ್ಲಿ ಇದ್ದ ಅಹಾರ ನಿರೀಕ್ಷಕ.ಗಣೇಶ್ ಸಹಾಯ ಮಾಡಿದರು
(Visited 5 times, 1 visits today)

Related posts

Leave a Comment