ರಸ್ತೆ ನಿರ್ಮಾಣ : ನಾಗರಕಟ್ಟೆ, ದರ್ಗಾಗಳಿಗೆ ಪಾಲಿಕೆ ನೋಟೀಸ್ – ಜಿಲ್ಲಾಧಿಕಾರಿ

 ತುಮಕೂರು:

     ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ನಿರ್ಮಾಣ ಕಾಮಗಾರಿ ಉದ್ದೇಶಕ್ಕೆ ತುಮಕೂರು ನಗರದ ನಾಗರಕಟ್ಟೆ, ದರ್ಗಾ ಸೇರಿದಂತೆ 8 ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವುದು ಸೂಕ್ಷ್ಮ ವಿಷಯವಾಗಿದ್ದು, ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ರವರು ತಿಳಿಸಿದ್ದಾರೆ. 

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು-ಶಿವಮೊಗ್ಗ 206 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ತುಮಕೂರು ನಗರದ ನಾಗರಕಟ್ಟೆ, 2 ದರ್ಗಾ ಸೇರಿದಂತೆ 8 ಧಾರ್ಮಿಕ ಕಟ್ಟಡಗಳು ತೆರವುಗೊಳಿಸುವ ಕುರಿತು ಸಂಬಂಧಿಸಿದವರಿಗೆ ತುಮಕೂರು ನಗರ ಪಾಲಿಕೆ ನೋಟೀಸ್ ಜಾರಿ ಮಾಡಿದೆ ಎಂದು ಅವರು ಹೇಳಿದರು.

      ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ವಿಚಾರ ಸೂಕ್ಷ್ಮ ವಿಷಯವಾಗಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಎಲ್ಲಾ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು.

      ತುಮಕೂರು ನಗರದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಜೀವನಾಧಾರಕ್ಕೆ ತೊಂದರೆಯಾಗದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಗುರುತಿಸಲ್ಪಟ್ಟ ನಿರ್ದಿಷ್ಟ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ದರಿದ್ದೇವೆ ಎಂದು ಅವರು ತಿಳಿಸಿದರು.

      ತುಮಕೂರು ನಗರದಲ್ಲಿ ರಸ್ತೆ ಬದಿಯ ಪಾದಚಾರಿ ಮಾರ್ಗಗಳನ್ನು ಅತಿ ಕ್ರಮಿಸಿರುವವರನ್ನು ತೆರವುಗೊಳಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಲೀಡ್‍ಬ್ಯಾಂಕ್ ಮ್ಯಾನೇಜರ್ ಜ್ಯೋತಿಗಣೇಶ್ ಹಾಜರಿದ್ದರು.

 

(Visited 15 times, 1 visits today)

Related posts

Leave a Comment