ರಾಮನಗರದಲ್ಲಿ ರಣರಂಗವಾಯ್ತು ಜೆಡಿಎಸ್ ಕಚೇರಿ

ರಾಮನಗರ:

      ಸಿಎಂ ಕುಮಾರಸ್ವಾಮಿ ಅವರು ಆಯ್ಕೆಯಾಗಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಜೆಡಿಎಸ್​ ಘಟಕದ ಪಕ್ಷದ ಕಚೇರಿಯಲ್ಲಿ ಮಾರಾಮಾರಿ ನಡೆದಿದೆ.

      ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಜೆಡಿಎಸ್​ ಅಧ್ಯಕ್ಷ, ಒಕ್ಕಲಿಗರ ಸಂಘದ ಸದಸ್ಯ ಜಯಮುತ್ತು ಮತ್ತು ಬಮೂಲ್​ನ ಮಾಜಿ ನಿರ್ದೇಶಕ ಲಿಂಗೇಶ್​ಕುಮಾರ್​ ಅವರ ನಡುವಿನ ಸಿಟ್ಟು ಘಟನೆಗೆ ಕಾರಣ ಎನ್ನಲಾಗಿದೆ. 

      ಜಯಮುತ್ತು ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಅವರ ಬೆಂಬಲಿಗರು ಬುಧವಾರ ಮೊದಲಿಗೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎರಡೂ ಬಣಗಳ ಮುಖಂಡರ ನಡುವೆ ಹೊಡೆದಾಟ ಸಂಭವಿಸಿದೆ. ಪಕ್ಷದ ಕಚೇರಿಯ ಪೀಟೋಪಕರಣಗಳನ್ನು ಪುಡಿ ಮಾಡಿ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದರು. ಈ ವೇಳೆ ಜಯಮುತ್ತು ಸೇರಿದಂತೆ ಹಲವು ಮುಖಂಡರಿಗೆ ಗಾಯಗಳಾಗಿವೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಚನ್ನಪಟ್ಟಣದ ಪುರ ಪೋಲೀಸರು ಭೇಟಿ ನೀಡಿದ್ದಾರೆ.

(Visited 16 times, 1 visits today)

Related posts

Leave a Comment