ರೈತರಿಂದ ಖರೀದಿಸಿ ಬಡವರಿಗೆ ದಾನ ಮಾಡಿದ ಮಾಜಿ ಶಾಸಕ ಸುರೇಶ್ ಗೌಡ!

ತುಮಕೂರು :

      ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬುರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸಿರಿವರ ಹಾಗೂ ಗಂಗೋನಹಳ್ಳಿ ಗ್ರಾಮ ಪಂಚಾಯ್ತಿಗಳ ಪ್ರತಿ ಮನೆ ಮನೆಗಳಿಗೆ ಉಚಿತ ಮಾಸ್ಕ್ ವಿತರಿಸಲಾಯಿತು

      ಇದೇ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ ಮತ್ತು‌ ಹಣ್ಣುಗಳನ್ನು ಬೆಳೆದ ರೈತರಿಂದ ಮಾರುಕಟ್ಟೆ ದರಕ್ಕೆ ನೇರವಾಗಿ ಖರೀದಿಸಲಾಯಿತು ಖರೀದಿ ಮಾಡಿದ ತರಕಾರಿಯನ್ನು ಪೊಟ್ಟಣಗಳನ್ನು ಕಟ್ಟಿ ಬಡ ಕುಟುಂಬಗಳಿಗೆ ಅಕ್ಕಿ, ಬೇಳೆ, ಉಪ್ಪು, ಅಡುಗೆ ತೈಲ, ಈರುಳ್ಳಿ ಮತ್ತು‌ ತರಕಾರಿ ಪೊಟ್ಟಣಗಳನ್ನು ಮಾಜಿ ಶಾಸಕರಾದ ಬಿ, ಸುರೇಶ್ ಗೌಡ ವಿತರಿಸಿದರು.

      ಸ್ಥಳೀಯ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ‌ ಬೆಲೆ ದೊರೆಯದೇ ಕಂಗಾಲಾಗಿದ್ದ ಬಡ ರೈತರ ಕುಟುಂಬಗಳು ಬೀದಿಗೆ ಬರುವ ಮುನ್ನ ಅಧಿಕಾರ ವಂಚಿತರಾದರು ನಂಬಿದ ಜನರನ್ನು ಕೈಬಿಡದೇ ಅವರ ಬೆಂಬಲಕ್ಕೆ ನಿಂತ ಮಾಜಿ ಶಾಸಕ ಬಿ ಸುರೇಶ್ ಗೌಡರು ರೈತರಿಂದ ನೇರವಾಗಿ ಖರೀದಿಸುವ ಮುಖೇನ ರೈತರ ಬದುಕು ಬೀದಿಗೆ ಬಂದು ಕಂಗಾಲಾಗುವ ಮುನ್ನ ಅವರ ಪರವಾಗಿ ನಿಂತು ಖರೀದಿಸಿ ಬಡವರು ಹಾಗೂ‌ ಕೂಲಿ ಕಾರ್ಮಿಕರಿಗೆ ಕೊಡುವ ಮುಖೇನ ಅಧಿಕಾರ ಇರಲಿ ಬಿಡಲಿ ನಾನು ನಿಮ್ಮೆಲ್ಲರ ಬೆಂಬಲಕ್ಕೆ ನಿಲ್ಲಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಸ್ಥಳೀಯ ರೈತರಾದ ಮಾಯಣ್ಣ ಗೌಡ ಮತ್ತು ಈರಯ್ಯ ಹಾಗೂ ವೆಂಕಟೇಶ್ ಸಂತಸ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಸುರೇಶ್ ಗೌಡರ ಅಭಿಮಾನಿ ಬಳಗದ ಅಧ್ಯಕ್ಷರಾದ ಉಮೇಶ್ ಗೌಡ್ರು,ಜಿಲ್ಲಾ ಪಂಚಾಯತಿ ಸದಸ್ಯರಾದ ರಾಜೇಗೌಡರು ಸಿರಿವಾರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪೂರ್ಣಿಮಾ, ಉಪಾಧ್ಯಕ್ಷರಾದ ನಾಗರಾಜ್, ಸದಸ್ಯರು ಗಳಾದ ರಂಗೇಗೌಡ, ಯಶೋಧಮ್ಮ ಸತ್ಯಪ್ಪ ಮುಖಂಡರಾದ ರಾಮಣ್ಣ, ಮನೋಹರ್, ಬಸವರಾಜು, ಶಿವಣ್ಣ, ಬೆಟ್ಟೇಗೌಡ, ದಿನೇಶ್,ಗಂಗೋನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ರಂಗಮ್ಮ, ಮಾಜಿ ಅಧ್ಯಕ್ಷರಾದ ನಾರಾಯಣಪ್ಪ, ಸುಂದರಣ್ಣ, ಮಾಜಿ ಉಪಾಧ್ಯಕ್ಷರಾದ ನಾಗರಾಜು, ಮುಖಂಡರಾದ ರಮೇಶಣ್ಣ , ಪ್ರಕಾಶ್, ದಿನೇಶ್, ಗಂಗಣ್ಣ, ಕೃಷ್ಣಪ್ಪ, ನಾಗರಾಜ, ಹರೀಶ್, ಉಮೇಶ್, ಮುಂತಾದವರು ಭಾಗವಹಿಸಿದ್ದರು

(Visited 81 times, 1 visits today)

Related posts

Leave a Comment