ಲೋಕಸಭಾ ಚುನಾವಣೆಯಲ್ಲಿ ಕಮಲ್​ ಹಾಸನ್ ಸ್ಪರ್ಧೆ ಖಚಿತ

ಮುಂಬೈ:

       ಮುಂಬರುವ 2019ನೇ ಲೋಕಸಭಾ ಚುನಾವಣೆಗೆ ಮಕ್ಕಳ್​ ನಿಧಿ ಮೈಯಮ್​ (ಎಂಎನ್ಎಂ) ಪಕ್ಷ ಖಂಡಿತವಾಗಿಯೂ ಸ್ಪರ್ಧಿಸುತ್ತದೆ ಎಂದು ನಟ, ಪಕ್ಷದ ಸಂಸ್ಥಾಪಕ ಕಮಲ್​ ಹಾಸನ್​ ತಿಳಿಸಿದ್ದಾರೆ. 

      ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲೂ ನಮ್ಮ ಎಂಎನ್​ಎಂ ಪಾರ್ಟಿ ಸಿದ್ಧವಾಗಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಮಿತಿ ರಚನೆ ಮಾಡುತ್ತೇವೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ನಾನು ಎದುರಿಸುತ್ತೇನೆ ಎಂದು ಹೇಳಿದ್ದಾರೆ. 

      ಮೈತ್ರಿ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ತಮಿಳುನಾಡಿನ ರಾಜಕೀಯದ ಮೂಲ ಸ್ವರೂಪವನ್ನೇ ಬದಲಿಸಲು ಹೊರಟ ಪಕ್ಷಗಳೊಂದಿಗೆ ಯಾವ ಕಾರಣಕ್ಕೂ ಹೊಂದಾಣಿಕೆ ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ. 

 

(Visited 14 times, 1 visits today)

Related posts