ಲ್ಲಾ ಉಸ್ತುವಾರಿ ಸಚಿವರ ಕಛೇರಿ ಉದ್ಘಾಟನೆ

 ತುಮಕೂರು:

ತುಮಕೂರು ಜಿಲ್ಲಾಧಿಕಾರಿ ಕಛೇರಿಯಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯನ್ನು ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಉದ್ಘಾಟಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 114ರಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಾ: ಜಿ.ಪರಮೇಶ್ವರ ಅವರ ಅಧಿಕೃತ ಕಛೇರಿಯನ್ನು ತೆರೆಯಲಾಗಿದೆ. ಉದ್ಘಾಟಿಸಿ ಮಾತನಾಡಿದ ಸಂಸದ ಮುದ್ದಹನುಮೇಗೌಡ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಬಹಳ ದಿನಗಳಿಂದ ಕಛೇರಿಯನ್ನು ತೆರೆಯುವುದಾಗಿ ಹೇಳುತ್ತಿದ್ದರು. ಉಪಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಇಂದು ಈ ಕಛೇರಿಯನ್ನು ನಾನು ಉದ್ಘಾಟಿಸಿದ್ದೇನೆ ಎಂದರು.

ಜಿಲ್ಲೆಯ ಜನರು ತಮ್ಮ ಸಮಸ್ಯೆಗಳನ್ನು ಉಸ್ತುವಾರಿ ಸಚಿವರ ಬಳಿ ಸಲ್ಲಿಸಲು/ ಹೇಳಿಕೊಳ್ಳಲು ಈ ಕಛೇರಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಈ ಕಛೇರಿಗೆ ವಿಶೇಷಾಧಿಕಾರಿ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗುವುದು. ಕ್ಷೇತ್ರದ ಜನರ ಸಮಸ್ಯೆಯನ್ನು ಪರಿಹರಿಸುವ ರೀತಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.  ಈ ಸಂದರ್ಭದಲ್ಲಿ ದಿನೇಶ್, ಅಶ್ವತ್ಥ ನಾರಾಯಣ, ಅರಕೆರೆ ಶಂಕರ್ ಮತ್ತಿತರರು ಹಾಜರಿದ್ದರು.

(Visited 19 times, 1 visits today)

Related posts