ವಿದ್ಯುತ್ ತಂತಿ ತಗುಲಿ ಯುವಕ ಸಾವು

ತುರುವೇಕೆರೆ:

      ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಸಂಜೆ ನೆಡೆದಿದೆ.
ಮೃತ ದುರ್ದೈವಿ ತಿಪಟೂರಿನ ಗೊರಗೊಂಡನಹಳ್ಳಿ ನಿವಾಸಿ ಶ್ರೀನಿವಾಸ್(20) ಎಂದು ತಿಳಿದು ಬಂದಿದೆ.

      ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನವೀಕರಣ ಕಾಮಗಾರಿ ಕೆಲಸ ನಿರ್ವಹಿಸಲು ಆಗಮಿಸಿದ್ದ ಈತ ಆಸ್ಪತ್ರೆ ನಾಮಫಲಕದ ಗೋಪುರದ ಸೆಂಟ್ರಿಂಗ್ ಕಾಮಗಾರಿ ಮಾಡಲು ಮಂಗಳವಾರ ಮುಂದಾಗಿದ್ದು. ಮಂಗಳವಾರ ಬೆಸ್ಕಾಂ ಇಲಾಖೆ ಸಂಜೆವರೆವಿಗೂ ವಿದ್ಯುತ್ ಖಡಿತಗೊಳಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದನ್ನು ಗಮನಿಸಿ ಖಚಿತ ಗೊಳಿಸಿಕೊಂಡೆ ಕಾರ್ಯನಿರ್ವಹಣೆಗೆ ಮುಂದಾಗಿದ್ದಾನೆ, ಆದರೆ ಸಂಜೆ 5ಗಂಟೆ ಸುಮಾರಿಗೆ ಹೆಬ್ಬಾಗಿಲಿನ ಸೆಂಟ್ರಿಂಗ್‍ಗೆ ಅಳವಡಿಸಿದ್ದ ಮರದ ಹಲಗೆಗಳನ್ನು ಕಬ್ಬಿಣದ ರಾಡಿನಿಂದ ತೆರವುಗೊಳಿಸುವ ಸಂದರ್ಬದಲ್ಲಿ ಸೆಂಟ್ರಿಂಗ್ ಮೇಲ್ಭಾಗದಲ್ಲಿಯೇ ಇದ್ದ ವಿದ್ಯುತ್ ತಂತಿಗೆ ಕಬ್ಬಿಣದ ರಾಡು ತಗಲಿ ವಿದ್ಯುತ್ ಶಾಕ್‍ನಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಸಾರ್ವಜನಿಕರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

     ವೈದ್ಯರು ಚಿಕಿತ್ಸೆ ನೀಡಿದ್ದಾರೆ ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 19 times, 1 visits today)

Related posts

Leave a Comment