ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ರಿಂದ ಕಾಂಪ್ಲೆಕ್ಸ್ ಉದ್ಘಾಟನೆ

ತುಮಕೂರು:

     ನಗರದ 15ನೇ ವಾರ್ಡಿಗೆ ಸಂಬಂಧಿಸಿದಂತೆ ಶುಕ್ರವಾರ ವಾರ್ಡಿನ ಸದಸ್ಯರ ಸಂಪರ್ಕ ಕಚೇರಿಯನ್ನು ಎಸ್.ಎಸ್.ಪುರಂ ಮುಖ್ಯರಸ್ತೆಯ ವಾಸವಿ ದೇವಾಲಯದ ಎದುರಿನ ಕಾಗ್ಗರೆ ಕಾಂಪ್ಲೆಕ್ಸ್ ಕಚೇರಿಯನ್ನು ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಉದ್ಘಾಟಿಸಿ, ಎಸ್.ಮಲ್ಲಿಕಾರ್ಜುನಯ್ಯ ಹೆಸರಿನ ಸಭಾಂಗಣಕ್ಕೆ ಧನಿಯ ರಾಜಣ್ಣ ಚಾಲನೆ ನೀಡಿದರು.

      ಈ ವೇಳೆ ಮಾತನಾಡಿದ ವಿ.ಸೋಮಣ್ಣ ಪಾಲಿಕೆ ಸದಸ್ಯರ ಈ ಕಚೇರಿ ಎಲ್ಲಾ ವರ್ಗದ ಜನರು ಬಂದು ತಮ್ಮ ಕಷ್ಟ ಸುಖಃಗಳನ್ನು ಹೇಳಿ ಪರಿಹರಿಸಿಕೊಂಡು ಹೋಗುವಂತಹ ಒಂದು ಕಚೇರಿಯಾಗಲಿ ಎಂದು ಶುಭ ಹಾರೈಸಿದರು.

      ವಾರ್ಡಿನ ಸದಸ್ಯರಾದ ಗಿರಿಜಾ ಧನಿಯಕುಮಾರ್ ಮಾತನಾಡಿ,ನಗರದ 15ನೇ ವಾರ್ಡು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು,ಗಾಂಧಿನಗರದಿಂದ ಎಸ್.ಎಸ್.ಪುರವರೆಗೂ ಇದೆ.ಇಲ್ಲಿನ ಹೆಚ್ಚಿನ ಜನರು ವ್ಯಾಪಾರಸ್ಥರು, ಉದ್ದಿಮೆದಾರರು ಮತ್ತು ಸರಕಾರಿ, ಅರೆ ಸರಕಾರಿ ಹಾಗೂ ಖಾಸಗಿ ವಲಯಗಳ ನೌಕರರೇ ಹೆಚ್ಚು, ಜೊತೆಗೆ ವ್ಯಾಪಾರಿ ಕೇಂದ್ರವೂ ಹೌದು. ಈ ಹಿನ್ನೆಲೆಯಲ್ಲಿ ಅವರ ಪ್ರತಿಯೊಂದು ಸಮಸ್ಯೆಗೂ ಸದಸ್ಯರನ್ನು ಹುಡುಕಿಕೊಂಡು ಪಾಲಿಕೆಗೆ ಅಲೆಯುವ ಬದಲು, ವಾರ್ಡಿನ ಮಧ್ಯಭಾಗದಲ್ಲಿ ಎಲ್ಲರಿಗೂ ಸಿಗುವಂತೆ ಕಚೇರಿ ಆರಂಭಿಸಿದ್ದೇವೆ.ಜನರಿಗೆ ಯಾವುದೇ ತೊಂದರೆಯಿದ್ದರೂ ನಮ್ಮನ್ನು ಕಂಡರೆ ಬಗೆಹರಿಸಿಕೊಡಲಾಗುವುದು.ನಮ್ಮ ಕಚೇರಿಗೆ ಬರಲು ಯಾವುದೇ ಮಧ್ಯವರ್ತಿಯ ಅವಶ್ಯಕತೆಯಿಲ್ಲ. ಬೆಳ್ಳಗೆ 9 ರಿಂದ ರಾತ್ರಿ 9 ರವರೆಗೆ ಕಚೇರಿ ತೆರೆದಿರುತ್ತದೆ. ಅಲ್ಲದೆ ನಮ್ಮ ವ್ಯಾಟ್ಸಫ್ ನಂಬರಿಗೆ ಮಾಹಿತಿ ನೀಡಿದರೂ ಅವರ ನೆರವಿಗೆ ದಾವಿಸಲಿದ್ದೇನೆ.ಜನರು ಇದರ ಸದುಪಯೋಗ ಪಡೆದುಕೊಂಡು, ವಾರ್ಡಿನ ಅಭಿವೃದ್ದಿ ನಮ್ಮೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

(Visited 40 times, 1 visits today)

Related posts