ವಿಶ್ವ ಶ್ರವಣ ದಿನ/ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನಕ್ಕೆ ಡಿಹೆಚ್‍ಒ ಚಾಲನೆ

ತುಮಕೂರು :

      ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾಣಿ ಪೌಂಡೇಶನ್, ಸಾರ್ವಜನಿಕ ಶಿಕ್ಷಣ ಇಲಾಖೆ, ರೆಡ್‍ಕ್ರಾಸ್ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿಂದು ಎನ್‍ಪಿಪಿಸಿಡಿ ಕಾರ್ಯಕ್ರಮದಡಿಯಲ್ಲಿ ಜೀವನಕ್ಕಾಗಿ ಶ್ರವಣ: ಶ್ರವಣ ದೋಷವು ನಿಮ್ಮನ್ನು ಮಿತಿಗೊಳಿಸಲು ಬಿಡಬೇಡಿ ಎಂಬ ಘೋಷಣೆಯೊಂದಿಗೆ ವಿಶ್ವ ಶ್ರವಣ ದಿನ/ರಾಷ್ಟ್ರೀಯ ಶ್ರವಣ ಜಾಗೃತಿ ಅಭಿಯಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ. ಆರ್. ಚಂದ್ರಿಕಾ ಅವರು ನಗರದ ಟೌನ್‍ಹಾಲ್ ಬಳಿ ಹಸಿರು ನಿಶಾನೆ ತೋರಿದರು.

      ಜಾಗೃತಿ ಅಭಿಯಾನದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಡಾ. ಮಹಿಮಾ, ಡಾ. ಕೇಶವರಾಜ್, ಡಾ. ಸನತ್‍ಕುಮಾರ್, ಡಾ. ಮೋಹನ್‍ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

      ವಿಶ್ವ ಶ್ರವಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥವು ನಗರದ ಟೌನ್‍ಹಾಲ್‍ನಿಂದ ಸಾಗಿ ಜಿಲ್ಲಾಸ್ಪತ್ರೆಯಲ್ಲಿ ಸಮಾವೇಶಗೊಂಡಿತು.

(Visited 14 times, 1 visits today)

Related posts

Leave a Comment