ವೈ.ಎಸ್.ಆರ್.ಜಗನ್ ಹತ್ಯೆಗೆ ಯತ್ನ

ವಿಶಾಖಪಟ್ಟಣಂ:

ಆಂಧ್ರಪ್ರದೇಶ ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ವರಿಷ್ಠ , ಮಾಜಿ ಮುಖ್ಯಮಂತ್ರಿ ವೈ.ಎಸ್​. ಆರ್​. ಪುತ್ರ ಜಗನ್​ ರೆಡ್ಡಿಗೆ ವಿಶಾಖಪಟ್ಟಣಂ ಏರ್​ಪೋರ್ಟ್​ನಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಏರ್​ಪೋರ್ಟ್​ಗೆ ಆಗಮಿಸಿ ಲಾಂಜ್​ನಲ್ಲಿ ಕುಳಿತಿದ್ದ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ಜತೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಆಗಮಿಸಿದ ದುಷ್ಕರ್ಮಿ ಕೃತ್ಯ ಎಸಗಿದ್ದಾನೆ.  ಕೋಳಿ ಕಾಳಗಕ್ಕೆ ಬಳಸುವ ಚಾಕುವಿನಿಂದ ಜಗನ್​ ಎದ ಭುಜಕ್ಕೆ ಇರಿದ್ದಾನೆ. ಜಗನ್​ ಅವರಿಗೆ ಏರ್​ಪೋರ್ಟ್​ನಲ್ಲಿಯೇ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಜಗನ್​ ಜತೆಗೇ ಇದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಚಾಕು ಇರಿದ ವ್ಯಕ್ತಿ ಹೋಟೆಲ್​ವೊಂದರಲ್ಲಿ ಸರ್ವರ್​ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

(Visited 9 times, 1 visits today)

Related posts

Leave a Comment