ಶಾಲಾ ಆವರಣದಲ್ಲಿ ಹುಕ್ಕಾ ಮಾರಾಟ!

ಕಲಬುರಗಿ: 

      ಇಲ್ಲಿನ ಶಾಲೆ, ಕಾಲೇಜುಗಳಆವರಣದಲ್ಲಿ ಎಗ್ಗಿಲ್ಲದೆ ಹುಕ್ಕಾ ಮಾರಾಟ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹುಕ್ಕಾ ಚಟಕ್ಕೆ ದಾಸರಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

      ಶಹಬಾದ್​ನ ನಿವಾಸಿ ರಜ್ವಾನ್​ ಎಂಬಾತ ಆರನೇ ತರಗತಿ ಮಕ್ಕಳಿಗೆ 1 ಸಾವಿರ ರೂ.ದಿಂದ 1,200 ರೂ.ವರೆಗೆ ಹಣ ತೆಗೆದುಕೊಂಡು ಹುಕ್ಕಾ ಮಾರಾಟ ಮಾಡಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು ದಂಧೆ ಬಯಲಾಗಿದೆ.
ಶಹಬಾದ್​ನ ಖಾಸಗಿ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿಗಳುಬಿಂದಾಸ್​ ಆಗಿ ಹುಕ್ಕಾ ಸೇದುತ್ತಿದ್ದಾರೆ. ಮಕ್ಕಳ ಈ ಚಟ ಪಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಳ್ಳತನದಲ್ಲಿ ತೊಡಗಿದ್ದ ಮಕ್ಕಳು:

      ತಮ್ಮ ಮನೆಯಲ್ಲಿ ಹಣ ಕಳವು ಆಗುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪಾಲಕರು ಮಗನನ್ನು ಹಿಂಬಾಲಿಸಿದಾಗ ಹುಕ್ಕಾ ತೆಗೆದುಕೊಂಡು ಹಣ ನೀಡುತ್ತಿದ್ದುದನ್ನು ಕಂಡು ಕಂಗಾಲಾಗಿದ್ದಾರೆ. ಕೂಡಲೇ ರಿಜ್ವಾನ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಕ್ಕಳಿಗೆ ಹಣ ಕದಿಯುವ ಉಪಾಯವನ್ನೂ ಆತನೇ ಹೇಳಿಕೊಟ್ಟಿದ್ದ ಎನ್ನಲಾಗಿದೆ

(Visited 14 times, 1 visits today)

Related posts

Leave a Comment