ಶಾಲಾ ಕೊಠಡಿಗಳಿಗೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ವರ್ಗಾವಣೆ

 
ಹುಳಿಯಾರು:

      ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಖಾಲಿ ಇರುವ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ಗ್ರಂಥಾಲಯ ಇಲಾಖೆ ಆದೇಶ ಹೊರಡಿಸಿದೆ.

      ಇಲಾಖೆಯ ಆದೇಶದಲ್ಲಿ ಪಂಚಾಯಿತಿ ವ್ಯಾಪ್ತಿಯ ಯಾವುದೇ ಊರುಗಳಲ್ಲಿ ಖಾಲಿ ಶಾಲಾ ಕೊಠಡಿ ಗುರುತಿಸಿ ಗ್ರಂಥಾಲಯ ಸ್ಥಳಾಂತರಿಸುವ ಅವಕಾಶ ಕಲ್ಪಿಸಲಾಗಿದೆ, ಇದರಿಂದ ಈಗಾಗಲೇ ಗ್ರಂಥಾಲಯ ಹೊಂದಿರುವ ಕೆಲವು ಪಂಚಾಯಿತಿ ಕಚೇರಿಗಳು ಗ್ರಂಥಾಲಯವನ್ನು ಕಳೆದುಕೊಳ್ಳುವಂತಾಗಿದೆ.

      ತಾಲ್ಲೂಕಿನ 23 ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. 7 ಪಂಚಾಯಿತಿಗಳಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಗ್ರಂಥಾಲಯಗಳನ್ನು ಮುಂದುವರಿಸಲಾಗಿದೆ. 10 ಪಂಚಾಯಿತಿ ಕೇಂದ್ರಗಳಲ್ಲಿ ಖಾಲಿ ಶಾಲಾ ಕೊಠಡಿ ಸಿಗದೆ ಜನ ಸಾಂದ್ರತೆ ಇಲ್ಲದ ಕುಗ್ರಾಮಗಳಿಗೆ ಗ್ರಂಥಾಲಯಗಳನ್ನು ವರ್ಗಾಯಿಸಲಾಗಿದೆ.

      ಬರಕನಾಳು ಪಂಚಾಯಿತಿಯ ಗ್ರಂಥಾಲಯವನ್ನು ಸಂಗೇನಹಳ್ಳಿಗೆ, ಹೊಯ್ಸಳಕಟ್ಟೆ ಪಂಚಾಯಿತಿ ಗ್ರಂಥಾಲಯವನ್ನು ತಿಮ್ಮಪ್ಪನಹಟ್ಟಿಗೆ, ಮಲ್ಲಿಗೆರೆ ಪಂಚಾಯಿತಿಯ ಗ್ರಂಥಾಲಯವನ್ನು ಕಾನ್ಕೆರೆಗೆ, ಬರಗೂರು ಗ್ರಂಥಾಲಯವನ್ನು ಟಿ.ತಾಂಡ್ಯಕ್ಕೆ, ಚೌಳಕಟ್ಟೆ ಗ್ರಂಥಾಲಯವನ್ನು ಸಬ್ಬೇನಹಳ್ಳಿಗೆ, ಹೊನ್ನೆಬಾಗಿ ಗ್ರಂಥಾಲಯವನ್ನು ಮೇಲನಹಳ್ಳಿಗೆ, ಕುಪ್ಪೂರು ಗ್ರಂಥಾಲಯವನ್ನು ದಿಬ್ಬದಹಳ್ಳಿಗೆ, ಕೋರಗೆರೆ ಗ್ರಂಥಾಲಯವನ್ನು ಬರಗೀಹಳ್ಳಿಗೆ, ಮತಿಘಟ್ಟ ಗ್ರಂಥಾಲಯವನ್ನು ಯಳ್ಳೇನಹಳ್ಳಿಗೆ, ತಿಮ್ಲಾಪುರ ಗ್ರಂಥಾಲಯವನ್ನು ನಂದಿಹಳ್ಳಿಗೆ ಸ್ಥಳಾಂತರಿಸಲಾಗಿದೆ.

(Visited 6 times, 1 visits today)

Related posts

Leave a Comment