ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಯಥಾಸ್ಥಿತಿ

      ಸ್ವಾಮೀಜಿಯವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಠದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ಇಲ್ಲದೆ ಒಂದು ಗಂಟೆ ಕಾಲ ಉಸಿರಾಟ ಮಾಡುತ್ತಿದ್ದಾರೆ. ಬಳಿಕ ವೆಂಟಿಲೇಟರ್ ಅಳವಡಿಕೆ ಮಾಡಲಾಗುತ್ತಿದೆ. ಶ್ರೀ ಗಳ ದೇಹದಲ್ಲಿ ಸೋಂಕು ಕಡಿಮೆಯಾಗಿದೆ. ದೇಹದಲ್ಲಿ ಶಕ್ತಿ ಇಲ್ಲದ ಕಾರಣ ಜೀರ್ಣಕ್ರಿಯೆ ಆಗುತ್ತಿಲ್ಲ. ಶಕ್ತಿಗಾಗಿ ಪ್ರೋಟಿನ್ ವಿಟಮಿನ್ ಅಲ್ಬುಮಿನ್ ಅಗತ್ಯವಿದೆ. ಇದೆಲ್ಲಾ ಕಡಿಮೆ ಇರುವುದರಿಂದ ಉಸಿರಾಟದ ತೊಂದರೆ ಆಗುತ್ತಿದೆ. ಸದ್ಯಕ್ಕೆ ದ್ರವಾಹಾರ ನೀಡಲಾಗುತ್ತಿಲ್ಲ. ಮೆಡಿಸಿನ್ ಮಾತ್ರ ಅವರಿಗೆ ನೀಡಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

     ಭಕ್ತಾದಿಗಳು ಪದೇ ಪದೇ ಮಠಕ್ಕೆ ಬರುವುದು ಬೇಡ. ಸ್ವಾಮೀಜಿ ಅವರಿಗೆ ವಿಶ್ರಾಂತಿ ಅಗತ್ಯವಿದೆ. ನೀವು ಬಂದರೂ ಶ್ರೀಗಳ ದರ್ಶನ ಮಾಡಲು ಆಗುವುದಿಲ್ಲ. ಅವರಿಗೆ ವಿಶ್ರಾಂತಿ ಅಗತ್ಯವಿರುವುದರಿಂದ ಮಠದ ಬರದಂತೆ ವೈದ್ಯರು ಮನವಿ ಮಾಡಿಕೊಂಡರು.

(Visited 30 times, 1 visits today)

Related posts

Leave a Comment