ಸಚಿವ ಡಿ.ವಿ.ಸದಾನಂದ ಗೌಡ – ಆರ್.ರಾಜೇಂದ್ರ ಭೇಟಿ!!

ಮಧುಗಿರಿ:

      ರಾಜ್ಯದಲ್ಲಿ ತಲೆದೋರಿರುವ ಯೂರಿಯಾ ಹಾಗೂ ರಸಗೊಬ್ಬರದ ಸಮಸ್ಯೆಯನ್ನು ನಿವಾರಣೆ ಮಾಡಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ ಮನವಿ ಮಾಡಿದ್ದಾರೆ .

      ಅವರು ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ರೈತರು ಇಟ್ಟಿರುವ ಬೆಳೆಗಳಿಗೆ ಯೂರಿಯಾ ಹಾಗೂ ರಸಗೊಬ್ಬರ ಕೊರತೆ ಕಂಡು ಬರುತ್ತಿರುವುದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕ್ರಿಬ್ಕೋಗೆ ಅಗತ್ಯವಿರುವ 15 ಸಾವಿರ ಟನ್ ಯೂರಿಯಾ ಮತ್ತು ರಸಗೊಬ್ಬರ ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

      ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡರವರು ರಾಜ್ಯಕ್ಕೆ ಅಗತ್ಯವಿರುವ ರಸ ಗೊಬ್ಬರವನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರ ಬೆಳೆಗಳಿಗೆ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದ್ದು, ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆಂದು ರಾಷ್ಟ್ರೀಯ ಕ್ರಿಬ್ಕೊ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದ್ದಾರೆ.

(Visited 5 times, 1 visits today)

Related posts

Leave a Comment