ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ..? : ಸಿಎಂ ಸ್ಪಷ್ಟನೆ ..!

ಬೆಂಗಳೂರು:

      ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ  ಎಂಬ ವಿಷಯದ ಕುರಿತು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ವದಂತಿಯಷ್ಟೇ, ಅವರು ಸಂಪುಟ ಸಭೆಗೆ ಹಾಜರಾಗಿದ್ದರು. ರಮೇಶ್ ರಾಜೀನಾಮೆ ಕೊಟ್ಟಿಲ್ಲ. ಅಲ್ಲದೇ 16 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬುದು ಗಾಳಿಸುದ್ದಿ ಎಂದು ಅವರು ತಿಳಿಸಿದ್ದಾರೆ.

       ಇನ್ನೊಂದೆಡೆ, ಬೆಳಗಾವಿಯಲ್ಲಿ ಮಾತನಾಡಿರುವ ಸ್ಪೀಕರ್​ ರಮೇಶ್​ಕುಮಾರ್​, ” ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ. ಅವರಿಂದ ಅಂಥ ಪತ್ರವೂ ನನಗೆ ಬಂದಿಲ್ಲ. ಇದು ವದಂತಿಯಷ್ಟೇ,” ಎಂದು ತಿಳಿಸಿದ್ದಾರೆ.

      ಕಬ್ಬು ಬೆಳೆಗಾರರ ಸಮಸ್ಯೆಯನ್ನು ರಮೇಶ್​ ಜಾರಕಿಹೊಳಿ ಅವರು ಅಲಿಸಲಿಲ್ಲ ಎಂಬ ಕಾರಣಕ್ಕೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಸಂಪುಟ ಸಭೆ ನಡೆಯುತ್ತಿರುವಾಗಲೇ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ರಮೇಶ್​ ಜಾರಕಿಹೊಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂಬ ಸುದ್ದಿ ಸಂಜೆ 4 ಗಂಟೆ ಸುಮಾರಿನಲ್ಲಿ ವ್ಯಾಪಕವಾಗಿ ಹರಡಿತ್ತು. ಆದರೆ, ಈಗ ಮುಖ್ಯಮಂತ್ರಿಯೇ ಈ ವಿಚಾರವನ್ನು ಅಲ್ಲಗೆಳೆದಿದ್ದಾರೆ.

(Visited 12 times, 1 visits today)

Related posts

Leave a Comment