ಸದಾನಂದ ಗೌಡರಿಗೆ ಒಲಿದ ಅನಂತ್​ ಕುಮಾರ್​ ಖಾತೆ

ದೆಹಲಿ:

     ಅನಾರೋಗ್ಯ ಕಾರಣದಿಂದ ಅಕಾಲಿಕ ಮರಣ ಹೊಂದಿದ ಕೇಂದ್ರ ಸಚಿವ ಅನಂತ್​ ಕುಮಾರ್​ ಅವರು ನಿರ್ವಹಿಸುತ್ತಿದ್ದ ಒಂದು ಖಾತೆಯನ್ನು ಡಿ.ವಿ.ಸದಾನಂದ ಗೌಡರಿಗೆ ಹಂಚಿಕೆ ಮಾಡಲಾಗಿದೆ.

​      ಈಗಾಗಲೇ, ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ನಿರ್ವಹಿಸುತ್ತಿದ್ದ ಸಂಸದ ಡಿ. ವಿ ಸದಾನಂದ ಗೌಡರಿಗೆ ಹೆಚ್ಚುವರಿಯಾಗಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ನೀಡಲಾಗಿದೆ.

      ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್‌ ತೋಮರ್‌ಗೆ ಸಂಸದೀಯ ವ್ಯವಹಾರಗಳ ಖಾತೆ ಹೆಚ್ಚುವರಿಯಾಗಿ ನೀಡಲಾಗಿದೆ.

      ಕೇಂದ್ರ ಸಚಿವರಾಗಿದ್ದಾಗ ಅನಂತ್​ ಕುಮಾರ್​ ರಾಸಾಯನಿಕ, ರಸಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ನಿಭಾಯಿಸುತ್ತಿದ್ದರು.

ಕೇಂದ್ರ ಸಂಪುಟ ಸಂತಾಪ :

      ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ತೀವ್ರ ಶೋಕ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ 2 ನಿಮಿಷ ಮೌನ ಆಚರಿಸಲಾಯಿತು.

 

 

 

(Visited 9 times, 1 visits today)

Related posts