ಸಾಲಭಾದೆ : ವ್ಯಕ್ತಿ ನೇಣಿಗೆ ಶರಣು

ಕೊರಟಗೆರೆ:

      ಸಾಲಭಾದೆ ತಾಳಲಾರದೆ ಮನನೊಂದ ವ್ಯಕ್ತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಜರುಗಿದೆ.

      ಕೊರಟಗೆರೆ ಪಟ್ಟಣದ ಕೆ.ಟಿ ದೊಡ್ಡಯ್ಯ (45ವರ್ಷ)ಎಂಬ ವ್ಯಕ್ತಿಯೇ ಸಾಲಭಾದೆ ತಾಳಲಾದರೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ದೊಡ್ಡಯ್ಯ ಕೊರಟಗೆರೆ ಪಟ್ಟಣದಲ್ಲಿ ಟೀ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಕೆಲ ದಿನಗಳಿಂದ ಗಟ್ಲಗೊಲ್ಲಹಳ್ಳಿಯ ಅತ್ತೆ ಮನೆಯಲ್ಲಿ ವಾಸವಿದ್ದ ಎನ್ನಲಾಗಿದ್ದು, ವಿಪರಿತ ಕೈಸಾಲ ಮಾಡಿಕೊಂಡು ಸಾಲಭಾದೆ ತಾಳಲಾರದೆ ಮನನೊಂದು ರಸ್ತೆ ಬದಿಯ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

      ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಮುನಿರಾಜು ಹಾಗೂ ಪಿಎಸ್‍ಐ ಮಂಜುನಾಥ್ ಕ್ರಮ ಕೈಗೊಂಡು ಹೆಚ್ಚಿನ ತನಿಖೆ ನೆಡೆಸುತ್ತಿದ್ದಾರೆ ಎನ್ನಲಾಗಿದೆ.

(Visited 9 times, 1 visits today)

Related posts

Leave a Comment