ಸಾವಿನಲ್ಲಿ ಅಂತ್ಯವಾದ ಬರ್ತಡೇ ಸಂಭ್ರಮ

ಚಿಕ್ಕಬಳ್ಳಾಪುರ:      ನಂದಿಬೆಟ್ಟದ ಬಳಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ವೇಗವಾಗಿ ಹೋಗುತ್ತಿದ್ದ ಮಾರುತಿ ಓಮ್ನಿವ್ಯಾನ್ ಮುಂದೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ದೇವನಹಳ್ಳಿಯ ಬಳಿ ಮಧ್ಯರಾತ್ರಿ ಘಟನೆ ನಡೆದಿದೆ .             

ಆರ್ . ಟಿ ನಗರದ ಚೋಳನಾಯ್ಕನಪಾಳ್ಯದ ಸುಂದರ್ ( 25), ವೆಂಕಟೇಶ್ (28ಸತೀಶ್ (24), ವಿಕಾಸ್ ( 23ಮೃತಪಟ್ಟವರು.ಗಾಯಗೊಂಡಿರುವ ವ್ಯಾನ್ ಚಾಲಕ ಹೇಮಂತ್ಅಜೀತ್ರವಿ,ಭರತ್, ಅವಿನಾಶ್ಮಧು ಹಾಗೂ ಮನೋಜ್ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ .

ಹೂವಿನ ಅಲಂಕಾರ ಮಾಡುವ ಕೆಲಸ ಮಾಡುತ್ತಿದ್ದ ಮೃತ ನಾಲ್ವರು ಗಾಯಗೊಂಡಿರುವಹೇಮಂತ್ ಅಜೀತ್ ರವಿ , ಭರತ್ , ಅವಿನಾಶ್ ಸೇರಿ 9ಮಂದಿ ಮಾರುತಿ ವ್ಯಾನ್ ನಲ್ಲಿನಂದಿಬೆಟ್ಟದ ಕಡೆಗೆ ರಾತ್ರಿ 12.30ರ ವೇಳೆ ದೇವನಹಳ್ಳಿಯ ಕನ್ನಮಂಗಲಪಾಳ್ಯ ಗೇಟ್ ರಸ್ತೆಯಲ್ಲಿ ಅತಿ ವೇಗವಾಗಿ ಹೋಗುತ್ತಾ ಮುಂದೆ ಚಿಕ್ಕಬಳ್ಳಾಪುರದ ಕಡೆ ಹೋಗುತ್ತಿದ್ದ ಇನ್ನೋವಾಕಾರಿಗೆ ಡಿಕ್ಕಿ ಹೊಡೆದು  ದುರ್ಘಟನೆ ಸಂಭವಿಸಿದೆ .

ಢಿಕ್ಕಿಯ ರಭಸಕ್ಕೆ ಸುಂದರ್ ವೆಂಕಟೇಶ್ ಸತೀಶ್ ವಿಕಾಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇತರ ಐವರು ಗಾಯಗೊಂಡಿದ್ದಾರೆ. 

(Visited 19 times, 1 visits today)

Related posts