ಸಾವಿನ ದವಡೆಯಲ್ಲಿ ಮಾತೆಯ ನೆನೆದ ಪತ್ರಕರ್ತ

ರಾಯ್ಪುರ: 

      ಅಮ್ಮ ಐ ಲವ್ ಯೂ, ಈ ದಾಳಿಯಲ್ಲಿ ನಾನು ಸಾಯಬಹುದು ಧೈರ್ಯವಾಗಿರು ಎಂದು ನಕ್ಸಲರು ದಾಳಿ ನಡೆಸುವ ವೇಳೆ ದೂರದರ್ಶನದ ಪತ್ರಕರ್ತ ಮೊರ್ ಮುಕ್ತ ಶರ್ಮಾ ತನ್ನ ಹೆತ್ತ ತಾಯಿಗೆ ರವಾನಿಸಿದ ಸಂದೇಶವಿದು.

      ಛತ್ತೀಸ್‌ಗಡದ ದಂತೇವಾಡದಲ್ಲಿ ನಕ್ಸಲರು ನಡೆಸಿದ ಭಯಾನದ ದಾಳಿಯನ್ನು ಕಣ್ಣಾರೆ ನೋಡಿದ ದೂರದರ್ಶನದ ಪತ್ರಕರ್ತ ಸಾವು ಕಣ್ಣ ಮುಂದೆ ಇದ್ದರೂ ವಿಡಿಯೋ ಮಾಡಿ, ತಮ್ಮ ಅನುಭವ ಹಾಗೂ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

      ನಕ್ಸಲರ ಬಳಿ ಗ್ರೆೆನೇಡ್, ಸ್ಫೋಟಕ ಸಾಮಾಗ್ರಿಗಳಿವೆ. ನಾವು ನಮ್ಮ ವಾಹಿನಿಯ ಲೋಗೋ ತೋರಿಸುವ ಪ್ರಯತ್ನ ಮಾಡಿದ್ದೆವು. ಆದರೆ, ಕ್ಷಣ ಕ್ಷಣಕ್ಕೂ ಗುಂಡಿನ ದಾಳಿ ಹೆಚ್ಚಾಗುತ್ತಲೇ ಹೋಯಿತು. ಅಷ್ಟೇ ಅಲ್ಲ. ನನಗೆ ಗುಂಡೇಟು ಬಿದ್ದಿದೆ. ನಾನು ಈ ದಾಳಿಯಲ್ಲಿ ಸಾಯಲೂ ಬಹುದು. ನನಗೆ ನನ್ನ ತಾಯಿ ಎಂದರೆ, ಬಹಳ ಇಷ್ಟ. ಅಮ್ಮ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದಾಳಿಯಲ್ಲಿ ನಾನು ಬದುಕದೇ ಹೋಗಬಹುದು, ನೀನು ಧೈರ್ಯವಾಗಿರು. ಸಾವಿಗೆ ನಾನು ಹೆದರುವುದಿಲ್ಲ ಎಂದು ಅವರು ಹೆತ್ತ ತಾಯಿಗೆ ಮನಕಲುಕುವ ಸಂದೇಶವನ್ನು ರವಾನಿಸಿದ್ದಾರೆ.

      ಮೊಮುಕ್ತ ಅವರು ಮಾಡಿರುವ ಈ ವಿಡಿಯೋವನ್ನು ದೂರದರ್ಶನ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿನ್ನೆೆಯಷ್ಟೇ ದಂತೇವಾಡದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಛಾಯಾಗ್ರಾಹಕ ಸಾಹು, ಇಬ್ಬರು ಯೋಧರು ಹುತಾತ್ಮರಾಗಿದ್ದರು, ಅಲ್ಲದೆ, ಮತ್ತಿಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು.

(Visited 8 times, 1 visits today)

Related posts

Leave a Comment