ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ವೈಜ್ಞಾನಿಕ ಚಿಂತಕ ಹುಲಿಕಲ್ ನಟರಾಜು ಆಯ್ಕೆ

 ತುರುವೇಕೆರೆ :

    ಜನವರಿ 30 ಮತ್ತು 31 ರಂದು ನಡೆಯಲಿರುವ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದಿಂದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತ ಸಾಹಿತಿ, ವೈಜ್ಞಾನಿಕ ಚಿಂತಕ ಹುಲಿಕಲ್ ನಟರಾಜು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

      ತಾಲ್ಲೂಕು ಕಸಾಪ ಭವನದಲ್ಲಿ ಮಂಗಳವಾರ ನಂ.ರಾಜು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆ, ಸಮಿತಿ ಉಪಸಮಿತಿಗಳ ಆಯ್ಕೆ, ಬಗೆಗೆ ಹಲವು ಸುತ್ತಿನ ಚರ್ಚೆ ನಂತರ ಅಂತಿಮವಾಗಿ ಆಯ್ಕೆ ಪ್ರಕ್ರಿಯೆಗಳನ್ನು ಅಧ್ಯಕ್ಷ ನಂ.ರಾಜು ಪ್ರಕಟಿಸಿದರು.

      ತಾಲ್ಲೂಕಿನ ಹುಲಿಕಲ್‍ನ ಕಲ್ಲೇಶಪ್ಪ – ಸೌಭ್ಯಮ್ಮ ದಂಪತಿಗಳ ಸುಪುತ್ರರಾದ ನಟರಾಜ್ ಧರ್ಮ, ದೇವರ ಹೆಸರಿನ ಹಿನ್ನೆಲೆಯಲ್ಲಿ ನಡೆಯುವ ಮೌಡ್ಯತೆ, ಬೂಟಾಟಿಕೆಯೊಂದಿಗೆ ಅಮಾಯಕರನ್ನು ವಂಚಿಸುವ ಮಾಟ, ಮಂತ್ರ, ಪವಾಡಗಳೆಂದು ನಂಬಿಸುವ ವಂಚಕರ ರಹಸ್ಯಗಳನ್ನು ವೈಜ್ಞಾನಿಕವಾಗಿ ಭೇದಿಸುವುದರೊಂದಿಗೆ ಇಡೀ ಸಮಾಜಕ್ಕೆ ಚಿಕಿತ್ಸಕ ಬುದ್ದಿಯನ್ನು ನೀಡಿದ್ದಾರೆ. ಇಂತಹ ಪವಾಡ ರಹಸ್ಯ ಬಯಲಿನ ಸಹಸ್ರಾರು ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಇಂದಿನ ಯುವ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಮೌಡ್ಯತೆಯನ್ನು ಹೋಗಲಾಡಿಸಿ, ವೈಜ್ಞಾನಿಕ ದೃಷ್ಠಿಕೋನ ಬೆಳೆಸುವಲ್ಲಿ ಸಮರ್ಥರಾಗಿದ್ದಾರೆ. ಇದರೊಂದಿಗೆ ಸಾಹಿತ್ಯ ಸೇವೆಯಲ್ಲೂ ತೊಡಗಿ ಹಲವು ವೈಜ್ಞಾನಿಕ ಚಿಂತಕ ಕೃತಿಗಳನ್ನು ಹೊರತಂದಿದ್ದಾರೆ. ರಾಜ್ಯ ಪುರಸ್ಕಾರದೊಂದಿಗೆ ರಾಷ್ಟ್ರೀಯ ಪುರಸ್ಕಾರವೂ ಲಭಿಸಿದ್ದು ವಿದೇಶಗಳಲ್ಲೂ ಸಹ ಹಲವು ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಖ್ಯಾತರಾಗಿದ್ದು, ಇವರು ಸಮ್ಮೇಳನ ಅಧ್ಯಕ್ಷರಾಗಲು ಒಪ್ಪಿರುವುದು ತಾಲ್ಲೂಕಿನ ಕನ್ನಡಿಗರ ಸೌಭಾಗ್ಯವೆಂದರು.

ಸಮಿತಿ:

      ಸಮ್ಮೇಳನದ ಯಶಸ್ಸಿಗೆ ಅಧ್ಯಕ್ಷರು, ಪಾಲ್ಗೊಳ್ಳುವ ಕವಿ, ಅತಿಥಿ ಗಣ್ಯರು ಪ್ರಮುಖವಾಗಿದ್ದು ಸ್ವಾಗತ ಸಮಿತಿ ಮೊದಲ ಆಧ್ಯತೆ ಪಡೆಯಲಿದೆ. ಸಾಹಿತ್ಯಾಸಕ್ತರಾದ ಶಾಸಕ ಮಸಾಲಾ ಜಯರಾಮ್ ರವರ ಅಧ್ಯಕ್ಷತೆಯಲ್ಲಿ ಇದು ಯಶಸ್ಸಿಗೊಳ್ಳಲಿದೆ ಎಂದು ಸರ್ವಸಮ್ಮತದ ಅನ್ವಯ ಶಾಸಕರನ್ನು ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಳಿಸಲಾಯಿತು.

      ಆಹಾರ ಮತ್ತು ಹಣಕಾಸು ಸಮಿತಿಗೆ ಮಾಜಿ ಕೃಷಿಮಾರುಕಟ್ಟೆ ಅಧ್ಯಕ್ಷರಾದ ಕೊಂಡಜ್ಜಿ ವಿಶ್ವನಾಥ ಹಾಗೂ ನೇತಕಾರ ಸಂಘದ ಎಂ.ಡಿ.ಮೂರ್ತಿ, ವೇದಿಕೆ ಸಮಿತಿಗೆ ನಿಕಟಪೂರ್ವ ಕಾಸಪ ಅಧ್ಯಕ್ಷ ಸಾ.ಶಿ.ದೇವರಾಜು, ನೌಕರರ ಸಂಘದ ಪ್ರಹ್ಲಾದ್, ಸಾಂಸ್ಕøತಿಕ ವೇದಿಕೆಗೆ ಕಲಾವಿದ ಅಮಾನಿಕೆರೆ ಮಂಜುನಾಥ್, ವಿ.ಬಿ.ಸುರೇಶ್, ಪ್ರಚಾರ ಸಮಿತಿಗೆ ನಿವೃತ್ತ ಅಧಿಕಾರಿ ಮಂಗಿಕುಪ್ಪೆ ಗಂಗಣ್ಣ, ನಾಗಭೂಷಣ್, ದುಂಡ ಮಲ್ಲಿಕಾರ್ಜುನ್, ಸ್ಮರಣ ಸಂಚಿಕೆ ಸಮಿತಿಗೆ ಪ್ರಧಾನ ಸಂಪಾದಕರುಗಳಾಗಿ ನಂ.ರಾಜು, ಸಾಹಿತಿ ಕೆ.ಭೈರಪ್ಪ, ತುರುವೇಕೆರೆ ಪ್ರಸಾದ್, ಪ್ರೊ.ಪುಟ್ಟರಂಗಪ್ಪ ಒಳಗೊಂಡಂತೆ ಸಮಿತಿ, ಉಪಸಮಿತಿ ಆಯ್ಕೆ ಪ್ರಕ್ರಿಯೆಗಳು ಜನವರಿ 5 ರಿಂದ ಆರಂಭಗೊಳ್ಳಲಿದೆ.

      ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷ ನಂ.ರಾಜು, ಪ್ರೊ. ಪುಟ್ಟರಂಗಪ್ಪ, ಕೊಂಡಜ್ಜಿ ವಿಶ್ವನಾಥ್, ದಂಡಿನಶಿವರ ಶಂಕರೇಗೌಡ, ನೌಕರ ಸಂಘದ ಅಧ್ಯಕ್ಷ ಮಂಜಣ್ಣ, ಪ್ರಹ್ಲಾದ್ ಉಪಸ್ಥಿತರಿದ್ದರು.
  

(Visited 21 times, 1 visits today)

Related posts