ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು : ಬಿಜಿಎಸ್ ಆಸ್ಪತ್ರೆಗೆ ದಾಖಲು

ಬೆಂಗಳೂರು:

       ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರು ತಮ್ಮ ಪ್ರತಿ ತಿಂಗಳ ಆರೋಗ್ಯದ ಸಲುವಾಗಿ ಇಂದು ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.  

     ನಿನ್ನೆ ಬಿಜಿಎಸ್ ಆಸ್ಪತ್ರೆ ವೈದ್ಯರು ಮಠಕ್ಕೆ ಬಂದು ಸ್ವಾಮಿಜಿಯವರ ಆರೋಗ್ಯ ತಪಾಸಣೆ ಮಾಡಿದ್ದರು. ಆದರೂ ಕೂಡ ಮತ್ತೊಮ್ಮೆ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಿಶೇಷ ತಪಾಸಣೆ ಮಾಡಬೇಕಿದೆ ಎಂದು ವೈದ್ಯರ ಬೇಡಿಕೆಯ ಮೇರೆಗೆ ಇಂದು ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. 
      ಸಣ್ಣದಾಗಿ ಜ್ವರ ಕಾಡುತ್ತಿದ್ದು, ರಕ್ತ ಪರೀಕ್ಷೆ, ಅಲ್ಟ್ರಾ ಸೌಂಡ್ ಮತ್ತು ಕಿಬ್ಬೊಟ್ಟೆಯ ಸಿಟಿ ಸ್ಕ್ಯಾನ್ ಮಾಡಲಾಗುತ್ತೆ‌. ಇನ್ನು ಕಳೆದ ಎರಡೂವರೆ ವರ್ಷಗಳಲ್ಲಿ 5 ಬಾರಿ ಶ್ರೀಗಳ ಲಿವರ್​​ನಲ್ಲಿ ಸ್ಟಂಟ್ ಅಳವಡಿಸಲಾಗಿದೆ. ಶ್ರೀಗಳಿಗೆ ಡಾ. ರವೀಂದ್ರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

      ಇಂದು ಬೆಂಗಳೂರಿನಲ್ಲೇ ಇರಲಿದ್ದು, ಇದಕ್ಕೆ ಪೂರ್ವಾಭಾವಿಯಾಗಿ ಮಠದಿಂದ  ಶ್ರೀಗಳ ಶಿಷ್ಯರು ಆಗಮಿಸಿದ್ದಾರೆ. ನಾಳೆ ಸಂಜೆವರೆಗೂ ಶ್ರೀಗಳು ಆಸ್ಪತ್ರೆಯಲ್ಲೇ ಇರಲಿದ್ದು, ಅವರ ದೈನಂದಿನ ದೇವರ ಕಾರ‍್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಗಳ ಶಿಷ್ಯವೃಂದ   ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದಾರೆ.  ಶ್ರೀಗಳು ರೋಟಿನ್ ಚೆಕ್ ಅಪ್ ಗಾಗಿ ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಭಕ್ತರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಅಂತ ಮಠದ ಮೂಲಗಳು ತಿಳಿಸಿವೆ. 

 

(Visited 23 times, 1 visits today)

Related posts