ಬಳ್ಳಾರಿ:
ಬರದ ಕಾರಣವೊಡ್ಡಿ ಹಂಪಿ ಉತ್ಸವ ರದ್ದು ಮಾಡಲು ಸರಕಾರ ಮುಂದಾಗಿರುವುದಕ್ಕೆ ಮಾಜಿ ಸಚಿವ, ಗಣಿಧಣಿ ಜಿ.ಜನಾರ್ದನ ರೆಡ್ಡಿ ಅವರು ವಿರೋಧ ವ್ಯಕ್ತ ಪಡಿಸಿದ್ದು, ಅದ್ಧೂರಿ ಉತ್ಸವಕ್ಕೆ ಆರ್ಥಿಕ ನೆರವು ಸೇರಿದಂತೆ ಸಕಲ ರೀತಿಯಲ್ಲಿ ಸಹಕರಿಸುವುದಾಗಿ ಹೇಳಿಕೊಂಡಿದ್ದಾರೆ.
ಈ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ.
ಕೋಟಿ ಕೋಟಿ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ಮಾಡ್ತೀರಿ. ಉಪ ಚುನಾವಣೆ ಗೆಲ್ಲೋದಕ್ಕೆ ನೀರಿನಂತೆ ಹಣ ಖರ್ಚು ಮಾಡ್ತೀರಿ. ಅವೆಲ್ಲದಕ್ಕೂ ಇರದ ಬರ, ಹಂಪಿ ಉತ್ಸವದ ವಿಚಾರಕ್ಕೆ ಏಕೆ ಬರುತ್ತೆ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಹಂಪಿ ಉತ್ಸವ ಮಾಡಲು ನಿಮ್ಮ ಕೈಲಿ ಆಗಲಿಲ್ಲ ಅಂದ್ರೆ ಹೇಳಿ. ನಾನು ದುಡ್ಡು ಕೊಡ್ತೇನೆ. ಹಂಪಿ ಉತ್ಸವ ನಡೆಸಿ ಅಂತ ದೋಸ್ತಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.
ಹಂಪಿ ಉತ್ಸವ 3 ದಿನ ಅದ್ದೂರಿಯಾಗಿಯೇ ನಡೆಯಲಿನಾಡಿನಲ್ಲಿ ವಿವಿಧೆಡೆ ಉತ್ಸವಗಳನ್ನು ಆಚರಿಸಲು ಉತ್ಸುಕತೆ ತೋರುತ್ತಿರುವ ರಾಜ್ಯ ಸರ್ಕಾರ ಕೇವಲ 3…
Geplaatst door Gali Janardhan Reddy op Maandag 3 december 2018
ಗುರುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ರೆಡ್ಡಿ ಅವರು ಹಂಪಿ ಉತ್ಸವ 3 ದಿನ ಅದ್ದೂರಿಯಾಗಿಯೇ ನಡೆಯಲಿ. ನಾಡಿನಲ್ಲಿ ವಿವಿಧೆಡೆ ಉತ್ಸವಗಳನ್ನು ಆಚರಿಸಲು ಉತ್ಸುಕತೆ ತೋರುತ್ತಿರುವ ರಾಜ್ಯ ಸರ್ಕಾರ ಕೇವಲ 3 ದಿನ ನಡೆಯುವ ಹಂಪಿ ಉತ್ಸವ ವಿಷಯದಲ್ಲಿ ಏನಾದರೂ ಒಂದು ಕುಂಟು ನೆಪ ಹೇಳುತ್ತಿರುವುದು ದುರಾದೃಷ್ಟಕರ ಎಂದು ಬರೆದಿದ್ದಾರೆ.